ಕರ್ನಾಟಕ

karnataka

ETV Bharat / state

ಕೈಗಾ ಅಣು ವಿದ್ಯುತ್ ಸ್ಥಾವರ ವಿರೋಧಿ ಸಮಾವೇಶಕ್ಕೆ ಪೇಜಾವರ ಶ್ರೀಗಳ ಸಾನಿಧ್ಯ: ಬಾಂದೇಕರ್​ - ಕೈಗಾ ಅಣು ವಿದ್ಯುತ್ ಸ್ಥಾವರ ವಿರುದ್ಧ ಕಾರವಾರದಲ್ಲಿ ಸಮಾವೇಶ

ಕೈಗಾ ಅಣು ವಿದ್ಯುತ್ ಸ್ಥಾವರದ 5 ಹಾಗೂ 6ನೇ ಘಟಕ ವಿರೋಧಿಸಿ, ಬೃಹತ್ ಜನಜಾಗೃತಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಈ ಸಾಮವೇಶದ ಸಾನಿಧ್ಯವನ್ನು ಉಡುಪಿಯ ವಿಶ್ವೇಶ ತೀರ್ಥ ಪೇಜಾವರ ಶ್ರೀಗಳು ವಹಿಸಿಕೊಳ್ಳಲಿದ್ದಾರೆ.

ಕೈಗಾ ಅಣು ವಿದ್ಯುತ್ ಸ್ಥಾವರ ವಿರುದ್ಧ ಸಮಾವೇಶ

By

Published : Nov 15, 2019, 9:55 AM IST

Updated : Nov 15, 2019, 10:08 AM IST

ಕಾರವಾರ:ಕೈಗಾ ಅಣು ವಿದ್ಯುತ್ ಸ್ಥಾವರದ 5 ಮತ್ತು 6ನೇ ಘಟಕ ವಿರೋಧಿಸಿ, ಬೃಹತ್ ಜನಜಾಗೃತಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಕಾರವಾರ ತಾಲೂಕಿನ ಮಲ್ಲಾಪುರ ಹಿಂದೂವಾಡದ ಕಾಳಿಕಾದೇವಿ ಮೈದಾನದಲ್ಲಿ ನವೆಂಬರ್ 17 ರಂದು ಸಮಾವೇಶವು ನಡೆಯಲಿದೆ.

ಪೇಜಾವರ ಶ್ರೀ, ಶಿರಸಿ ಸೋಂದಾ ಮಠದ ಗಂಗಾಧರೇಂದ್ರ ಶ್ರೀ, ಸೋದೆ ಜಗದ್ಗುರು ವಿಶ್ವವಲ್ಲಭ ತೀರ್ಥರು, ಸೋಂದಾ ಜೈನಮಠದ ಭಟ್ಟಕಳಂಕ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ, ಹಾಗೂ ಶ್ರೀರಾಮಕೃಷ್ಣಾಶ್ರಮದ ಭಾವೇಶಾನಂದ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಸಮಾವೇಶವು ನಡೆಯಲಿದೆ.

ಈ ಕುರಿತು ಮಾತನಾಡಿದ ಕೈಗಾ ಅಣು ವಿದ್ಯುತ್ ಸ್ಥಾವರದ 5 ಮತ್ತು 6ನೇ ಘಟಕ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಶಾಂತಾ ಬಾಂದೇಕರ್, ಕೈಗಾದ 5 ಹಾಗೂ 6ನೇ ಘಟಕಕ್ಕೆ ಕೇಂದ್ರ ಸರ್ಕಾರ ಪರವಾನಗಿ ನೀಡಿರುವುದು ಜಿಲ್ಲೆಯ ದುರಾದೃಷ್ಟ ಎಂದರು.

ಕೈಗಾ ಅಣು ವಿದ್ಯುತ್ ಸ್ಥಾವರ ವಿರುದ್ಧ ಸಮಾವೇಶದ ಕುರಿತು ಸುದ್ದಿಗೋಷ್ಟಿ

ಈ ಯೋಜನೆಯಿಂದಾಗಿ ಸುತ್ತಲಿನ ಹಳ್ಳಿಗಳಲ್ಲಿ ವಾಸಿಸುವ ಜನರಲ್ಲಿ ಕ್ಯಾನ್ಸರ್‌ ಹಾಗೂ ಮೂತ್ರಪಿಂಡ ವೈಫಲ್ಯದಂತಹ ಭೀಕರ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ ಎಂದು ಆರೋಪಿಸಿದರು. ಇದರಿಂದಾಗಿ ಸ್ಥಳೀಯ ಜನರಲ್ಲಿ ಆತಂಕವುಂಟಾಗಿದೆ. ಹೀಗಾಗಿ ಅಣು ವಿಕಿರಣದಿಂದ ಜಿಲ್ಲೆಯ ಪರಿಸರವನ್ನು ರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದರು. ಹಾಗಾಗಿ ಸಾರ್ವಜನಿಕರು, ಪರಿಸರವಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಮಾವೇಶದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

Last Updated : Nov 15, 2019, 10:08 AM IST

For All Latest Updates

TAGGED:

ABOUT THE AUTHOR

...view details