ಕರ್ನಾಟಕ

karnataka

ETV Bharat / state

ವಿವಾದಿತ ಮೂರಿನಕಟ್ಟೆ ನಾಮಫಲಕ ಕಿತ್ತ ವಿಚಾರ: ತಂಝೀಂ ಆರೋಪ - ಭಟ್ಕಳ ಸುದ್ದಿ

ಮೂರಿನಕಟ್ಟೆ ನಾಮಫಲಕವನ್ನು ಕೀಳುತ್ತಿದ್ದ ಕಾರಗದ್ದೆ ನಿವಾಸಿ ಬಾಬು ಮಾಸ್ತಪ್ಪ ನಾಯ್ಕನರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದೆ. ಪೊಲೀಸರು ಕ್ರಮಕೈಗೊಳ್ಳುವ ಭರವಸೆ ನೀಡಿದ್ದರು. ಆದ್ರೆ ಶನಿವಾರ 107 ಕೇಸ್ ಹಾಕಿ ಜಾಮೀನು ನೀಡಿದ್ದಾರೆ.

Bhatkal
ತಂಝೀಂ

By

Published : Feb 8, 2021, 1:38 PM IST

ಭಟ್ಕಳ(ಉ.ಕ):ಪಟ್ಟಣದ ವಿವಾದಿತ ಕೇಂದ್ರವಾಗಿರುವ ತೆಂಗಿನಗುಂಡಿ ಬಳಿಯ ಮೂರಿನಕಟ್ಟೆಯ ಸ್ಥಳದಲ್ಲಿ ಹಾಕಿದ್ದ ನಾಮಫಲಕವನ್ನು ವ್ಯಕ್ತಿಯೊರ್ವ ಕೀಳಲು ಪ್ರಯತ್ನ ನಡೆಸಿದ್ದು ಈ ಕುರಿತು ಪೊಲೀಸ್ ಪ್ರಕರಣ ದಾಖಲಿಸಿದರು ಇದನ್ನು ಲಘುವಾಗಿ ಪರಿಗಣಿಸಲಾಗುತ್ತಿದೆ. ಇಂತಹ ಕೃತ್ಯ ಮುಂದುವರೆದರೆ ಭಟ್ಕಳದ ನೆಮ್ಮದಿಗೆ ಭಂಗ ತಪ್ಪಿದಲ್ಲ ಎಂದು ತಂಝೀಂ ಮುಖಂಡ ಇನಾಯಿತುಲ್ಲಾ ಶಾಬಂದ್ರಿ ಆರೋಪಿಸಿದರು.

ಮೂರಿನಕಟ್ಟೆ ನಾಮಫಲಕ ಕಿತ್ತ ವಿಚಾರಕ್ಕೆ ತಂಝೀಂ ಆರೋಪ

ಪಟ್ಟಣದ ತಂಝೀಂ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶುಕ್ರವಾರ ಮಧ್ಯರಾತ್ರಿ ನಾನು ಮನೆಗೆ ತೆರಳುವಾಗ ಮೂರಿನಕಟ್ಟೆ ನಾಮಫಲಕವನ್ನು ಕೀಳುತ್ತಿದ್ದ ಕಾರಗದ್ದೆ ನಿವಾಸಿ ಬಾಬು ಮಾಸ್ತಪ್ಪ ನಾಯ್ಕ ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದೆ. ಪೊಲೀಸರು ಕ್ರಮಕೈಗೊಳ್ಳುವ ಭರವಸೆ ನೀಡಿದ್ದರು. ಶನಿವಾರ 107 ಕೇಸ್ ಹಾಕಿ ಜಾಮೀನು ನೀಡಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಪೊಲೀಸ್ ವಾಹನವಿದ್ದರೂ ಪೊಲೀಸರಿರಲಿಲ್ಲ. ಭಟ್ಕಳದಂತಹ ಸೂಕ್ಷ್ಮ ಪ್ರದೇಶದಲ್ಲಿ ಇಂತಹ ಘಟನೆಗಳೂ ಹಲವು ಬಾರಿ ನಡೆದಿವೆ. ಹಲವು ದೇವಾಲಯಗಳ ಮೇಲೆ ಮಲ, ಮಾಂಸವನ್ನು ಎರಚಿ ಕೋಮು ಭಾವನೆ ಕೆರಳಿಸಲಾಗಿದೆ. ಈ ಘಟನೆಯೂ ಕೂಡ ಅಂತಹದೇ ಪ್ರಕರಣವಾಗಿದ್ದರೂ ಪೊಲೀಸರು ಗಂಭೀರವಾಗಿ ಏಕೆ ಪರಿಗಣಿಸಲಿಲ್ಲ ಎಂದು ಪ್ರಶ್ನಿಸಿದರು.

ಭಟ್ಕಳದಲ್ಲಿ ಶಾಂತಿ ನೆಲೆಸಿದೆ. ಜನರು ನೆಮ್ಮದಿಯಿಂದ ಇದ್ದಾರೆ. ಕೋಮುಭಾವನೆ ಕೆರಳಿಸುವ ಇಂತಹ ಕೃತ್ಯ ಯಾರೇ ಮಾಡಿದರೂ ಅವರಿಗೆ ಶಿಕ್ಷೆ ಆಗಬೇಕು. ಮಧ್ಯರಾತ್ರಿಯಲ್ಲಿ ಆತ ಯಾರ ಆದೇಶ ಮೇಲೆ ಅಲ್ಲಿಗೆ ಬಂದಿದ್ದ ಎನ್ನುವುದರ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಅವರು ಇದೇ ವೇಳೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ತಂಝೀಮ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ, ಭಟ್ಕಳ ಈಗ ಶಾಂತವಾಗಿದ್ದು ಯಾವುದೇ ಕಹಿಘಟನೆಗಳಿಗೆ ಆಸ್ಪದ ನೀಡದೆ ಸಮಾಜದ್ರೋಹಿ, ದೇಶದ್ರೋಹಿಗಳನ್ನು ಹಿಡಿದು ಒಳಗೆ ಹಾಕಬೇಕು, ಪೊಲೀಸರ ಮೂಗಿನ ಕೆಳಗೆ ಇಂತಹ ಕೃತ್ಯಗಳು ನಡೆಯುತ್ತಿದ್ದರೂ ಇಲಾಖೆಯ ಗಮನಕ್ಕೆ ಬಾರದೇ ಇರುವುದು ಸಾಮಾನ್ಯರಲ್ಲಿ ಆಶ್ಚರ್ಯವನ್ನುಂಟು ಮಾಡುತ್ತಿದೆ. ಮುರಿಕಟ್ಟೆ ತೆರವು ವಿವಾದ ಹೆದ್ದಾರಿ ಪ್ರಾಧಿಕಾರಕ್ಕೆ ಬಿಟ್ಟಿದ್ದು ಅದಕ್ಕೂ ನಮಗೂ ಸಂಬಧವಿಲ್ಲ. ಆದರೆ ಮುರಿಕಟ್ಟೆ ನಾಮಫಲಕ ಕಿತ್ತುಹಾಕುವಂತಹ ನಾಚಿಕೆಗೇಡು ಕೆಲಸಕ್ಕೆ ಮಾಡುತ್ತಿರುವುದು ಮಾತ್ರ ಭಟ್ಕಳದ ಹಿಂದೂ-ಮುಸ್ಲಿಮರಲ್ಲಿ ಬೇಸರವನ್ನುಂಟು ಮಾಡಿದೆ ಎಂದರು.

ಈ ಸಂದರ್ಭದಲ್ಲಿ ಭಟ್ಕಳ ಮುಸ್ಲಿಮ್ ಯುತ್ ಫೆಡರೇಶನ್ ಅಧ್ಯಕ್ಷ ಮೌಲಾನ ಅಝೀಝರ‍್ರಹ್ಮಾನ್ ನದ್ವಿ ರುಕ್ನುದ್ದೀನ್, ತಂಝೀಮ್ ಮುಖಂಡ ಅಬ್ದುಲ್ ಅಹಿದ್, ಸಿದ್ದೀಖ್ ಡಿ.ಎಫ್ ಉಪಸ್ತಿತರಿದ್ದರು.

ABOUT THE AUTHOR

...view details