ಕರ್ನಾಟಕ

karnataka

ETV Bharat / state

ಎಷ್ಟೇ ದುಡಿದ್ರೂ ಸಿಗದ ಸೇವಾ ಭದ್ರತೆ.. ಬೇಸತ್ತ ಹೊರಗುತ್ತಿಗೆ ನೌಕರರಿಂದ ಅನಿರ್ಧಿಷ್ಟಾವಧಿ ಮುಷ್ಕರ - ಕಾರವಾರದಲ್ಲಿ ಪ್ರತಿಭಟನೆ

ರಾಜ್ಯಾದ್ಯಂತ ಸಾರ್ವಜನಿಕರ ಆರೋಗ್ಯ ಸೇವೆಯಲ್ಲಿ ತೊಡಗಿರುವ ಹೊರಗುತ್ತಿಗೆ ನೌಕರರಿಗೆ ಈವರೆಗೂ ಸೇವಾ ಭದ್ರತೆ ಇಲ್ಲ. ಮಾತ್ರವಲ್ಲದೆ ಸರ್ಕಾರದಿಂದ ಯಾವುದೇ ಒಂದು ಸೌಲಭ್ಯಗಳು ಸಹ ಸಿಗುತ್ತಿಲ್ಲ. ಸಮಾನ ಕೆಲಸಕ್ಕೆ ಸರಿಯಾದ ವೇತನ ಕೂಡ ಈವರೆಗೆ ದೊರೆತಿಲ್ಲ..

Contract Basis Workers Protesting
ಹೊರಗುತ್ತಿಗೆ ನೌಕರರಿಂದ ಪ್ರತಿಭಟನೆ

By

Published : Oct 2, 2020, 7:11 PM IST

ಕಾರವಾರ :ಆರೋಗ್ಯ, ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದಡಿ ಕೆಲಸ ನಿರ್ವಹಿಸುತ್ತಿರುವ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ನಗರದಲ್ಲಿ ನೌಕರರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.

ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣದ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರರು ಭಾರತೀಯ ಮಜ್ದೂರ್ ಸಂಘದ ಸಹಯೋಗದಲ್ಲಿ ರಾಜ್ಯಾದ್ಯಂತ ಮುಷ್ಕರ ಹಮ್ಮಿಕೊಂಡಿದ್ದು, ಕಾರವಾರದ ಜಿಲ್ಲಾಧಿಕಾರಿ ಕಚೇರಿ ಬಳಿಯೂ ನೂರಾರು ನೌಕರರು ತಮಗಾಗುತ್ತಿರುವ ಅನ್ಯಾಯ ಸರಿಪಡಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಹೊರಗುತ್ತಿಗೆ ನೌಕರರಿಂದ ಪ್ರತಿಭಟನೆ

ರಾಜ್ಯಾದ್ಯಂತ ಸಾರ್ವಜನಿಕರ ಆರೋಗ್ಯ ಸೇವೆಯಲ್ಲಿ ತೊಡಗಿರುವ ಹೊರಗುತ್ತಿಗೆ ನೌಕರರಿಗೆ ಈವರೆಗೂ ಸೇವಾ ಭದ್ರತೆ ಇಲ್ಲ. ಮಾತ್ರವಲ್ಲದೆ ಸರ್ಕಾರದಿಂದ ಯಾವುದೇ ಒಂದು ಸೌಲಭ್ಯಗಳು ಸಹ ಸಿಗುತ್ತಿಲ್ಲ. ಸಮಾನ ಕೆಲಸಕ್ಕೆ ಸರಿಯಾದ ವೇತನ ಕೂಡ ಈವರೆಗೆ ದೊರೆತಿಲ್ಲ.

ಇಲಾಖೆಗಳಲ್ಲಿ ಖಾಯಂ ನೌಕರರಂತೆ ದಿನವಿಡೀ ದುಡಿಯುತ್ತಿದ್ದರೂ ಸಹ ನಮ್ಮ ಸೇವೆ ಕೇವಲ ಒಂದು ವರ್ಷಕ್ಕೆ ಮಾತ್ರ ಸೀಮಿತವಾಗುತ್ತಿದೆ. ಹತ್ತಾರು ವರ್ಷಗಳಿಂದ ನಾವು ಇಲ್ಲಿಯೇ ದುಡಿಯುತ್ತಿದ್ದರೂ ಸಹ ನಮಗೆ ಯಾವುದೇ ಭದ್ರತೆ ಇಲ್ಲದಂತಾಗಿದೆ ಎಂದು ಪ್ರತಿಭಟನಾಕಾರರು ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಹತ್ತಾರು ಬಾರಿ ಸರ್ಕಾರಕ್ಕೆ ಮನವಿ ಮಾಡಿದಾಗ ಮೂರು ತಿಂಗಳಲ್ಲಿ ಬೇಡಿಕೆ ಈಡೇರಿಸುವುದಾಗಿ ಹೇಳಿದ್ದರು. ಆದರೆ, ಇದೀಗ ಐದು ತಿಂಗಳು ಕಳೆದ್ರೂ ಯಾವುದೇ ಪ್ರಯೋಜನವಾಗಿಲ್ಲ.

ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ನಿರ್ಲಕ್ಷ್ಯವಹಿಸುತ್ತಿದ್ದು, ಈ ಕಾರಣದಿಂದ ಅನಿವಾರ್ಯವಾಗಿ ಇಂದಿನಿಂದ ಕೆಲಸ ಬಹಿಷ್ಕರಿಸಿ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸುತ್ತಿದ್ದೇವೆ. ಬೇಡಿಕೆ ಈಡೇರುವವರೆಗೂ ಮುಷ್ಕರ ಮುಂದುವರಿಯಲಿದ್ದು, ಕೋವಿಡ್ ಕಾರಣದಿಂದ ನಿತ್ಯ ಒಂದಿಷ್ಟು ಮಂದಿ ಮಾತ್ರ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಂಘದ ಅಧ್ಯಕ್ಷ ಡಾ. ಸುಹಾಸ್ ಹೇಳಿದ್ದಾರೆ.

ABOUT THE AUTHOR

...view details