ಕರ್ನಾಟಕ

karnataka

ETV Bharat / state

ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಗ್ಯಾರಂಟಿಗೆ ಒಪ್ಪಿಗೆ: ಬಿಪಿಎಲ್ ಕಾರ್ಡ್​ಗಾಗಿ ಕಚೇರಿಗಳಿಗೆ ಮುಗಿಬಿದ್ದ ಜನ - ಗ್ಯಾರಂಟಿ ಯೋಜನೆ ಅನುಷ್ಠಾನ

ಕಾಂಗ್ರೆಸ್​ ಅಧಿಕಾರಕ್ಕೆ ಬರುತ್ತಿದ್ದಂತೆ ಐದು ಗ್ಯಾರಂಟಿ ಅನುಷ್ಠಾನಕ್ಕೆ ಮುಂದಾಗಿದೆ. ಬಿಪಿಎಲ್ ಕಡ್ಡಾಯಗೊಳಿಸಬಹುದು ಎಂಬ ಜನರಲ್ಲಿ ವದಂತಿ ಹಬ್ಬಿದ್ದು, ಬಿಪಿಎಲ್ ಕಾರ್ಡ್​ ಮಾಡಿಸಲು ಉತ್ತರಕನ್ನಡ ಜಿಲ್ಲೆಯ ತಾಲೂಕು ಕಚೇರಿಗಳಿಗೆ ಜನ ಮುಗಿ ಬೀಳುತಿದ್ದಾರೆ.

People came to Karwar taluk office for BPL card
ಬಿಪಿಎಲ್ ಕಾರ್ಡ್​ಗಾಗಿ ಕಾರವಾರ ತಾಲೂಕು ಕಚೇರಿಗೆ ಆಗಮಿಸಿದ ಜನ

By

Published : May 23, 2023, 3:58 PM IST

ಕಾರವಾರ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಏರುತ್ತಿದ್ದಂತೆ, ಚುನಾವಣಾ ಪೂರ್ವ ಮತದಾರರಿಗೆ ಕೊಟ್ಟ ಭರವಸೆಯಂತೆ ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ಮೊದಲ ಸಚಿವ ಸಂಪುಟ ಸಭೆಯಲ್ಲಿ ತಾತ್ವಿಕ ಒಪ್ಪಿಗೆ ನೀಡಿದೆ. ಆದರೆ ಇದೀಗ ಗ್ಯಾರೆಂಟಿ ಯೋಜನೆಯ ಲಾಭ ಪಡೆಯಲು‌‌‌ ಬಿಪಿಎಲ್ ಕಡ್ಡಾಯಗೊಳಿಸ ಬಹುದೆಂಬ ದೃಷ್ಟಿಯಿಂದ ಬಿಪಿಎಲ್ ಕಾರ್ಡ್​ಗಾಗಿ ಉತ್ತರಕನ್ನಡ ಜಿಲ್ಲೆಯಲ್ಲಿ ಜನ ಸರ್ಕಾರಿ ಕಚೇರಿಗಳಿಗೆ ಮುಗಿಬೀಳುತಿದ್ದಾರೆ. ಈ ಕುರಿತು ಒಂದು ವರದಿ ಈಟಿವಿ ಭಾರತ ಇಲ್ಲಿ ಪ್ರಕಟಿಸಿದೆ.

ಹೌದು.. ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಐದು ಗ್ಯಾರಂಟಿ ಭರವಸೆಗಳನ್ನು ಘೋಷಣೆ ಮಾಡಿದೆ. ಇದೀಗ ಅದರ ಅನುಷ್ಟಾನಕ್ಕೆ ಮುಂದಾಗಿದೆ. ಹೀಗಾಗಿ ಯೋಜನೆಯ ಲಾಭ ಪಡೆಯಲು ಉತ್ತರ ಕನ್ನಡ ಜಿಲ್ಲೆಯಲ್ಲಿ ಜನ ಮುಗಿಬೀಳುತಿದ್ದು, ಹಿಂದೆ ಬಿಪಿಎಲ್​ಗೆ ಅರ್ಜಿ ಸಲ್ಲಿಸಿದವರು ತಾಲೂಕು ಕಚೇರಿಗಳಲ್ಲಿ ನಿತ್ಯವೂ ಅಲೆದಾಡತೊಡಗಿದ್ದಾರೆ.

ಅಲ್ಲದೇ ಹೊಸ ಕಾರ್ಡ್ ಮಾಡಿಸಲು ಕರ್ನಾಟಕ ಒನ್ ಹಾಗೂ ಸೈಬರ್ ಸೆಂಟರ್​ಗೆ ಧಾವಿಸುತಿದ್ದಾರೆ. ಆದರೆ, ಸರ್ಕಾರದಿಂದ ಹೊಸ ರೇಷನ್ ಕಾಡ್೯ಗೆ ಅರ್ಜಿ ಸಲ್ಲಿಸುವ ಕುರಿತಾಗಿ ಇನ್ನು ಯಾವುದೇ ಸೂಚನೆ ಬಂದಿಲ್ಲ. ಸರ್ಕಾರ ಸೂಚನೆ ನೀಡಿದ ನಂತರ ಬಿಪಿಎಲ್ ಕಾರ್ಡ್​ಗೆ ಅರ್ಜಿ ಸಲ್ಲಿಸಲು ಆನ್ ಲೈನ್ ಮೂಲಕ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಹೀಗಾಗಿ ಅರ್ಜಿ ಸಲ್ಲಿಸಲು ಬಂದವರು ವಾಪಸ್​ ಮರಳುವಂತಾಗಿದೆ. ಇನ್ನು ಈ ಹಿಂದೆಯೇ ಅರ್ಜಿ ಸಲ್ಲಿಸಿದವರಿಗೆ ಈ ವರೆಗೂ ಬಿಪಿಎಲ್ ಕಾರ್ಡ ಸಿಗದೇ ಸರ್ಕಾರಿ ಕಚೇರಿ ಹತ್ತಿಳಿಯುವಂತಾಗಿದೆ. ಅರ್ಜಿ ಹಾಕಿದವರಿಗೆ ಕೂಡಲೇ ಬಿಪಿಎಲ್ ಕಾರ್ಡ್ ವಿತರಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ರೇಷನ್ ಕಾಡ್೯ದಲ್ಲಿ ತಪ್ಪು ತಿದ್ದುಪಡೆಗೆ ಅರ್ಜಿ:ಇನ್ನು ಜಿಲ್ಲೆಯಲ್ಲಿ ಈ ವರೆಗೆ 15,170 ಅರ್ಜಿಗಳನ್ನು ಸಲ್ಲಿಸಲಾಗಿದೆ. ಇದರಲ್ಲಿ 14,669 ಅರ್ಜಿಗಳು ವಿಲೇವಾರಿಯಾಗಿದ್ದು 501 ಅರ್ಜಿಗಳು ವಿತ್ ಡ್ರಾ ಮಾಡಿಕೊಂಡಿದ್ದಾರೆ. 12,472 ಅರ್ಜಿಗಳಲ್ಲಿ 5,901 ಅರ್ಜಿಗಳನ್ನು ಊರ್ಜಿತಗೊಳಿಸಲಾಗಿದೆ. 1,558 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. 7,459 ರೇಷನ್ ಕಾರ್ಡ್​​ಗಳನ್ನು ಪ್ರಸಕ್ತ ಸಾಲಿನಲ್ಲಿ ಅರ್ಜಿದಾರರಿಗೆ ನೀಡಲಾಗಿದೆ.

ಆದರೆ, ಇನ್ನು 7210 ಅರ್ಜಿಗಳು ಸರ್ವರ್ ಸಮಸ್ಯೆ ಹಾಗೂ ಇತರ ಕಾರಣದಿಂದ ಪೆಂಡಿಂಗ್ ಇದ್ದು ಅರ್ಜಿ ಸಲ್ಲಿಸಿದವರು ರೇಷನ್ ಕಾರ್ಡ ಗಾಗಿ ಕಾಯುವಂತಾಗಿದೆ. ಇನ್ನು ಹೊಸ ಅರ್ಜಿಗಳನ್ನು ಸಹ ಸಲ್ಲಿಸಲು ಸರ್ಕಾರ ಇನ್ನೂ ಸೂಚನೆ ನೀಡಿಲ್ಲ. ಈಗ ಕೇವಲ ರೇಷನ್ ಕಾರ್ಡ್​​ನಲ್ಲಾದ ತಪ್ಪುಗಳ ತಿದ್ದುಪಡೆಗೆ ಮತ್ತು ತುರ್ತು ಚಿಕಿತ್ಸೆಗೆ ಸಂಬಂಧಿಸಿದಂತೆ ಮಾತ್ರ ಅರ್ಜಿ ಪಡೆಯಲಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.

ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಮೊದಲ ದಿನವೇ ಭರವಸೆಯಂತೆ ಐದು ಗ್ಯಾರಂಟಿಗಳನ್ನು ಪೂರೈಸುವ ಘೋಷಣೆ ಮಾಡಿದ್ದರಿಂದ ತಮಗೆ ಉಚಿತ ವಿದ್ಯುತ್, ಗೃಹಲಕ್ಷ್ಮಿ, ಮಹಿಳೆಯರಿಗೆ ಉಚಿತ ಬಸ್ ಪಾಸ್, 10 ಕೆಜಿ ಅಕ್ಕಿ ಸಿಗುವ ನಿರೀಕ್ಷೆಯಲ್ಲಿ ಜನರಿದ್ದಾರೆ. ಹೀಗಾಗಿ ಈ ಯೋಜನೆಗೆ ಅಗತ್ಯವಾಗಿ ಬೇಕಾದ ಬಿಪಿಎಲ್ ಕಾರ್ಡ ಬೇಡಿಕೆ ಹೆಚ್ಚಾಗಿದ್ದು, ಆಹಾರ ಇಲಾಖೆ ಕಚೇರಿಗೆ ಮುಗಿಬೀಳುವಂತಾಗಿದೆ.

ಇದನ್ನೂಓದಿ:ಕಾರವಾರದಲ್ಲಿ ಕಡಲ ಮಕ್ಕಳ ಹಗ್ಗಜಗ್ಗಾಟ: ಗಮನ ಸೆಳೆದ 22 ತಂಡಗಳ ಬಲ ಪ್ರದರ್ಶನ

ABOUT THE AUTHOR

...view details