ಕರ್ನಾಟಕ

karnataka

ETV Bharat / state

ಯಲ್ಲಾಪುರ.. ಕಾಂಗ್ರೆಸ್​ ಬಂಡಾಯ ಅಭ್ಯರ್ಥಿ ನಾಮಪತ್ರ ತಿರಸ್ಕೃತ.. - ಕರ್ನಾಟಕ ಉಪಚುನಾವಣೆಯಲ್ಲಿ ತಿರಸ್ಕೃತ ನಾಮಪತ್ರಗಳು

ಶಿರಸಿ ಯಲ್ಲಾಪುರ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್​ನಿಂದ ಬಂಡಾಯವೆದ್ದ ಲಕ್ಷ್ಮಣ ಬನ್ಸೋಡೆ ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್ ಬಿ-ಫಾರಂ ಇಲ್ಲದ ಕಾರಣ ನಾಮಪತ್ರವನ್ನು ತಿರಸ್ಕರಿಸಲಾಗಿದೆ.

ಕಾಂಗ್ರೆಸ್​ ಬಂಡಾಯ ಅಭ್ಯರ್ಥಿ ಲಕ್ಷ್ಮಣ ಬನ್ಸೋಡೆ

By

Published : Nov 19, 2019, 11:44 PM IST

ಶಿರಸಿ:ಯಲ್ಲಾಪುರ ವಿಧಾನಸಭೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಲಕ್ಷ್ಮಣ್ ಬನ್ಸೋಡೆ ಅವರ ನಾಮಪತ್ರವನ್ನು ಚುನಾವಣಾಧಿಕಾರಿಗಳು ತಿರಸ್ಕರಿಸಿದ್ದು, ಪಕ್ಷೇತರ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಎಂದು ಪ್ರತ್ಯೇಕ ಎರಡು ನಾಮಪತ್ರ ಸಲ್ಲಿಸಿದ್ದ ಮುಂಡಗೋಡಿನ ಲಕ್ಷ್ಮಣ್ ಬಣ್ಸೋಡಿ ಕಾಂಗ್ರೆಸ್​ನಿಂದ ಬಂಡಾಯವಾಗಿ 18ರಂದು ನಾಮಪತ್ರ ಸಲ್ಲಿಸಿದ್ದರು.

ಕಾಂಗ್ರೆಸ್​ ಬಂಡಾಯ ಅಭ್ಯರ್ಥಿ ಲಕ್ಷ್ಮಣ ಬನ್ಸೋಡೆ

ನಾಮಪತ್ರ ಸಲ್ಲಿಕೆ ವೇಳೆ ಕಾಂಗ್ರೆಸ್ ಅಭ್ಯರ್ಥಿ ಎಂದು ಬರೆದಿದ್ದರಿಂದ ಬಿ.ಫಾರ್ಮ್ ಇಲ್ಲದ ಕಾರಣ ಚುನಾವಣಾಧಿಕಾರಿಗಳು ಈ ಕ್ರಮಕ್ಕೆ ಮುಂದಾಗಿದ್ದಾರೆ. ಸಲ್ಲಿಕೆಯಾದ ಎರಡು ನಾಮಪತ್ರದಲ್ಲಿ ಒಂದು ನಾಮಪತ್ರ ತಿರಸ್ಕರಿಸಿದ್ದು, ಪಕ್ಷೇತರವಾಗಿ ಸಲ್ಲಿಸಿದ ನಾಮಪತ್ರ ಪುರಸ್ಕೃತ ಮಾಡಲಾಗಿದೆ.

19 ನಾಮಪತ್ರ: ಯಲ್ಲಾಪುರ ಉಪ ಕದನದಲ್ಲಿ 19 ನಾಮಪತ್ರ ಪುರಸ್ಕೃತವಾಗಿದ್ದು, ಒಟ್ಟೂ 11 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ABOUT THE AUTHOR

...view details