ಕರ್ನಾಟಕ

karnataka

ETV Bharat / state

ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲು ಕೇಂದ್ರ-ರಾಜ್ಯ ವಿಫಲವೆಂದು ಪ್ರತಿಭಟಿಸಿದ ಕಾಂಗ್ರೆಸ್ - 25 ಸಂಸದರು

ರಾಜ್ಯದಲ್ಲಿ ಭೀಕರ ಅತಿವೃಷ್ಟಿಯಿಂದ ಜನರು ತೊಂದರೆಗೆ ಒಳಗಾಗಿದ್ದರೂ ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲು ವಿಫಲವಾದ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ಶಿರಸಿ ಬ್ಲಾಕ್ ಕಾಂಗ್ರೆಸ್ ಹಾಗೂ ಬನವಾಸಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶಿರಸಿ ನಗರದ ತಹಶಿಲ್ದಾರ ಕಚೇರಿಯ ಎದುರು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಯಿತು. ‌

ಶಿರಸಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ

By

Published : Sep 13, 2019, 5:32 AM IST

ಶಿರಸಿ :ರಾಜ್ಯದಲ್ಲಿ ಭೀಕರ ಅತಿವೃಷ್ಟಿಯಿಂದ ಜನರು ತೊಂದರೆಗೆ ಒಳಗಾಗಿದ್ದರೂ ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲು ವಿಫಲವಾದ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ಶಿರಸಿ ಬ್ಲಾಕ್ ಕಾಂಗ್ರೆಸ್ ಹಾಗೂ ಬನವಾಸಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಗರದ ತಹಶಿಲ್ದಾರ ಕಚೇರಿಯ ಎದುರು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಯಿತು. ‌

ಭ್ರಷ್ಟ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ, ನೆರೆ ಪರಿಹಾರ ನೀಡಲು ವಿಫಲವಾದ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ, ಮೋಟಾರ್ ವಾಹನ ಕಾಯ್ದೆ ಜಾರಿಗೆ ತಂದ ಸರ್ಕಾರಕ್ಕೆ, ಸುಳ್ಳಿನ ಸರ್ಕಾರಕ್ಕೆ ಧಿಕ್ಕಾರ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ತಹಶಿಲ್ದಾರ ಕಚೇರಿಯ ಎದುರು ಕೂತು ಸಾಂಕೇತಿಕವಾಗಿ ಧರಣಿಯನ್ನೂ ನಡೆಸಿದ್ದಾರೆ.

ಶಿರಸಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ
ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಭೀಮಣ್ಣ ನಾಯ್ಕ, ರಾಜ್ಯದಲ್ಲಿ ಜನರು ನೆರೆ ಹಾನಿಯಿಂದ ತತ್ತರಿಸಿ ಹೋಗಿದ್ದಾರೆ.‌ ಕೇಂದ್ರದ ಮೂರು ಮಂತ್ರಿಗಳು ಬಂದು ವೀಕ್ಷಣೆ ಮಾಡಿದರೂ ಒಂದು ರೂಪಾಯಿ ಸಹ ಬಿಡುಗಡೆಯಾಗಿಲ್ಲ. 25 ಸಂಸದರು ರಾಜ್ಯದಲ್ಲಿದ್ದಾರೆ. ಪ್ರಧಾನಿ ಬಳಿಗೆ ಹೋಗಿ ಮಾತನಾಡುವ ತಾಕತ್ತು ಇದೆಯೋ ಇಲ್ಲವೋ ಗೊತ್ತಿಲ್ಲ. ಇವರೆಲ್ಲರಿಗೂ ನಾಚಿಕೆ ಆಗಬೇಕು. ಕೇಂದ್ರ, ರಾಜ್ಯ ಸರ್ಕಾರ ಬಿಜೆಪಿಯದೇ ಇದ್ದರೂ,‌ ಇಲ್ಲಿನ ಸಂಸದರಿಗೆ ಒಂದು ರೂಪಾಯಿ ತರುವ ಯೋಗ್ಯತೆ ಇಲ್ಲ. ಇವರಿಗೆ ರೈತರ ಕಷ್ಟ ಗೊತ್ತಿಲ್ಲ, ಬೇಸಾಯ ಮಾಡಿವರೂ ಇವರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ABOUT THE AUTHOR

...view details