ಕರ್ನಾಟಕ

karnataka

ETV Bharat / state

ದೇಶಕ್ಕಾಗಿ ಮಡಿದ ಯೋಧರಿಗೆ ಭಟ್ಕಳದಲ್ಲಿ ಶ್ರದ್ಧಾಂಜಲಿ ಅರ್ಪಣೆ - condolence for warriors who died in Galwan valley

ಭಾರತ-ಚೀನಾ ಗುಂಡಿನ ಚಕಮಕಿಯಲ್ಲಿ ದೇಶಕ್ಕಾಗಿ ತ್ಯಾಗ ಮಾಡಿದ ಸೈನಿಕರಿಗೆ ಭಟ್ಕಳದ ವಿವಿಧ ಸಂಘಟನೆಗಳಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ವೇಳೆ ತಾಲೂಕು ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ಎಂ.ಡಿ. ಫಕ್ಕಿ ಹಾಗೂ ಶಾಸಕ ಸುನೀಲ್​ ನಾಯ್ಕ್ ಹಾಗೂ ಇನ್ನಿತರರು ಹಾಜರಿದ್ದರು.

condolence for Soldiers in Bhatkala
ಯೋಧರಿಗೆ ಭಟ್ಕಳದಲ್ಲಿ ಶ್ರದ್ಧಾಂಜಲಿ ಅರ್ಪಣೆ

By

Published : Jun 22, 2020, 3:35 PM IST

ಭಟ್ಕಳ(ಉತ್ತರ ಕನ್ನಡ):ಭಾರತ ಚೀನಾ ಗಡಿಯ ಗಲ್ವಾನ್ ಕಣಿವೆಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ 20 ಭಾರತೀಯ ಯೋಧರಿಗೆ ಭಟ್ಕಳದ ಪ್ರವಾಸಿ ಮಂದಿರದ ಎದುರಿನ ಮಾಜಿ ಸೈನಿಕರ ಸಂಘ ಮತ್ತು ತಾಲೂಕಿನ ವಿವಿಧ ಸಂಘಟನೆಗಳಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಯೋಧರಿಗೆ ಭಟ್ಕಳದಲ್ಲಿ ಶ್ರದ್ಧಾಂಜಲಿ ಅರ್ಪಣೆ

ಕಾರ್ಯಕ್ರಮದ ನಂತರ ಮಾತನಾಡಿದ ತಾಲೂಕು ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ಎಮ್.ಡಿ. ಫಕ್ಕಿ, ಚೀನಾ ಮೊದಲು ಕೊರೊನಾ ವೈರಸ್ ಮೂಲಕ ಜಗತ್ತಿನ ನೆಮ್ಮದಿಯನ್ನೇ ಭಂಗ ಮಾಡಿತು. ನಂತರ ಕುತಂತ್ರದಿಂದ ಭಾರತದ ಭೂಭಾಗವನ್ನು ಕಬಳಿಸಲು ಬರುತ್ತಿದೆ. ಇಂತ ಪಿತೂರಿಗೆ ನಮ್ಮ ಸೈನಿಕರು ಎಂದಿಗೂ ಅವಕಾಶ ನೀಡುವುದಿಲ್ಲ. ಸೈನಿಕರ ಬೆಂಬಲಕ್ಕೆ ಭಾರತೀಯರಾದ ನಾವು ಸದಾ ಸಿದ್ಧ ಎಂದರು.

ಯೋಧರಿಗೆ ಭಟ್ಕಳದಲ್ಲಿ ಶ್ರದ್ಧಾಂಜಲಿ ಅರ್ಪಣೆ

ಶಾಸಕ ಸುನೀಲ್ ನಾಯ್ಕ ಮಾತನಾಡಿ 'ಮಳೆ ಗಾಳಿ ಚಳಿ ಎನ್ನದೆ ದೇಶವನ್ನು ಕಾಯುತ್ತಿರುವ ಸೈನಿಕರ ಬೆಂಬಲಕ್ಕೆ ನಿಲ್ಲಲು ನಾವು ಯಾವಾಗಲೂ ಸಿದ್ದರಿದ್ದು ನಿಮ್ಮ ಜೊತೆ ನಾವಿದ್ದೇವೆ. ಚೀನಾ ಕುತಂತ್ರಕ್ಕೆ ನಮ್ಮ 20 ಯೋಧರು ಬಲಿಯಾಗಿರುವುದು ಅತ್ಯಂತ ದುರಾದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದರು.

ಯೋಧರಿಗೆ ಭಟ್ಕಳದಲ್ಲಿ ಶ್ರದ್ಧಾಂಜಲಿ ಅರ್ಪಣೆ

ಭಟ್ಕಳ ಬಿಜೆಪಿ ಅಧ್ಯಕ್ಷ ಸುಬ್ರಾಯ ದೇವಾಡಿಗ, ಭಟ್ಕಳ ಕಾಂಗ್ರೆಸ್ ಅಧ್ಯಕ್ಷ ಸಂತೋಷ ನಾಯ್ಕ, ಭಟ್ಕಳ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್, ಗೋವಿಂದ ನಾಯ್ಕ, ಶ್ರೀಧರ ನಾಯ್ಕ ಆಸರಕೇರಿ, ಕೃಷ್ಣ ನಾಯ್ಕ ಆಸರಕೇರಿ, ವಿಠ್ಠಲ್ ನಾಯ್ಕ, ಮೊದಲಾದವರು ಗಲ್ವಾನ್ ಘಟನೆಯನ್ನು ಖಂಡಿಸಿ ಮಾತನಾಡಿದರು. ಅಲ್ಲದೆ, ಚೀನಾ ನಿರ್ಮಿತ ವಸ್ತುಗಳನ್ನು ಬಹಿಷ್ಕರಿಸುವ ಮೂಲಕ ಆರ್ಥಿಕವಾಗಿಯೂ ತಕ್ಕ ಪಾಠ ಕಲಿಸಬೇಕಾದ ಅಗತ್ಯ ಇದೆ ಎಂದು ಪ್ರತಿಪಾದಿಸಿದರು.

ABOUT THE AUTHOR

...view details