ಭಟ್ಕಳ(ಉತ್ತರ ಕನ್ನಡ):ಬಿಜೆಪಿ ಶಾಸಕ ಸುನೀಲ್ ನಾಯ್ಕ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವೈಯಕ್ತಿಕ ವಿಷಯದ ಕುರಿತು ಟೀಕಿಸುತ್ತಿರುವ ಹಿನ್ನೆಲೆ, ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ದ ಪ್ರಕರಣ ದಾಖಲಾಗಿದೆ.
ಭಟ್ಕಳ ಶಾಸಕನ ವಿರುದ್ಧ ಅವಹೇಳನ ಆರೋಪ: ನಾಲ್ವರ ವಿರುದ್ಧ ಪ್ರಕರಣ ದಾಖಲು - ಭಟ್ಕಳ ಶಾಸಕ ಸುನೀಲ್ ನಾಯ್ಕ ಬಗ್ಗೆ ವಾಟ್ಸ್ಯಾಪ್ ಗುಂಪೊಂದರಲ್ಲಿ ಅವಹೇಳನಕಾರಿಯಾಗಿ ಸಂಭಾಷಣೆ
ಭಟ್ಕಳ ಶಾಸಕ ಸುನೀಲ್ ನಾಯ್ಕ ಬಗ್ಗೆ ವಾಟ್ಸ್ಆ್ಯಪ್ ಗುಂಪೊಂದರಲ್ಲಿ ಅವಹೇಳನಕಾರಿಯಾಗಿ ಸಂಭಾಷಣೆ ನಡೆಸಿದ ಹಿನ್ನೆಲೆ, ನಾಲ್ವರ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಭಟ್ಕಳ ಶಾಸಕ
ಹೋಟೆಲ್ ಗೋಲ್ಡ್ ಪುಂಚ್ ಹಟಾವೋ ಎಂಬ ವಾಟ್ಸ್ಆ್ಯಪ್ ಗ್ರೂಪ್ನಲ್ಲಿ, ಶಾಸಕರ ವೈಯಕ್ತಿಕ ವಿಷಯವನ್ನು ಎಳೆದು ಅವಹೇಳನಕಾರಿ ಶಬ್ದ ಬಳಸಿ ಚಾರಿತ್ರ್ಯ ಹರಣ ಮಾಡಲಾಗಿದೆ ಎಂದು ಶಾಸಕರ ಆಪ್ತ ಸಹಾಯಕ ಕರಿಯಪ್ಪ ನಾಯ್ಕ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ದೂರಿನನ್ವಯ ಭಟ್ಕಳ ಮೂಲದ ಚೌಥನಿ, ಹೊನ್ನಾವರದ ಮೂಲದ ಹಡೀನ್ ಸೇರಿದಂತೆ ಒಟ್ಟು ನಾಲ್ವರ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.