ಕರ್ನಾಟಕ

karnataka

ETV Bharat / state

ಕಟ್ಟಳೆಗಳನ್ನು ಬಿಟ್ಟು ಸಾಮಾನ್ಯರೊಂದಿಗೆ ಬೆರೆತ ಕಮಾಂಡೆಂಟ್... ವಿಡಿಯೋ - Commandant Manoj Badakar arrived at Karwar

ಸದ್ಯ ಸೀಬರ್ಡ್ ನೌಕಾನೆಲೆಗೆ ತೆರಳಿರುವ ಕಮಾಂಡೆಂಟ್ ಮನೋಜ್ ಬಾಡಕರ್, ನಾಳೆ ಜಿಲ್ಲಾಧಿಕಾರಿ, ಮೀನುಗಾರರು, ಪತ್ರಕರ್ತರನ್ನು ಭೇಟಿಯಾಗಿ ಭಾನುವಾರ ಸಂಜೆ ವಾಪಸ್​​ ಮುಂಬೈಗೆ ತೆರಳಲಿದ್ದಾರೆ.

Commandant Manoj Badakar arrived at Karwar
ಕಟ್ಟಳೆಗಳನ್ನು ಬಿಟ್ಟು ಸಾಮಾನ್ಯರೊಂದಿಗೆ ಬೆರೆತ ಕಮಾಂಡೆಂಟ್

By

Published : Oct 29, 2022, 1:59 PM IST

ಕಾರವಾರ: ನಗರಕ್ಕೆ ಆಗಮಿಸಿದ ಕೋಸ್ಟ್ ಗಾರ್ಡ್ ಪಶ್ಚಿಮ ವಲಯದ ಕಮಾಂಡೆಂಟ್ ಮನೋಜ್ ಬಾಡಕರ್ ಅವರು ಎಲ್ಲ ಕಟ್ಟಳೆಗಳನ್ನು ಬಿಟ್ಟು ಸಾಮಾನ್ಯ ಜನರು, ವಿದ್ಯಾರ್ಥಿಗಳು, ಸ್ನೇಹಿತರೊಂದಿಗೆ ಆತ್ಮೀಯವಾಗಿ ಬೆರೆತು ಗಮನ ಸೆಳೆದರು. ಮೂರು ದಿನದ ಕಾರವಾರ ಪ್ರವಾಸ ಕೈಗೊಂಡಿರುವ ಅವರು ಶುಕ್ರವಾರ ನಗರದ ಮಾಲಾದೇವಿ ಮೈದಾನಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ್ದರು.

ಕಾರವಾರಕಗ್ಕೆ ಆಗಮಿಸಿದ ಕಮಾಂಡೆಂಟ್​ ಮನೋಜ್​ ಬಾಡಕರ್​

ಮೂಲತಃ ಕಾರವಾರದವರೇ ಆಗಿದ್ದ ಮನೋಜ್ ಬಾಡಕರ್ ನಗರಕ್ಕೆ ಆಗಮಿಸುವ ಸುದ್ದಿ ಸಿಗುತ್ತಿದ್ದಂತೆ ಮಾಲಾದೇವಿ ಮೈದಾನದಲ್ಲಿ ಕಾದು ನಿಂತಿದ್ದ ಸ್ನೇಹಿತರು, ಹಳೆಯ ಸಹಪಾಠಿಗಳು, ವಿವಿಧ ಸಂಘ- ಸಂಸ್ಥೆಗಳ ಮುಖಂಡರು ಸೇರಿದಂತೆ ಸಾರ್ವಜನಿಕರನ್ನು ಭೇಟಿಯಾದರು. ಎಲ್ಲರೊಂದಿಗೂ ಆತ್ಮೀಯವಾಗಿ ಮಾತನಾಡಿ ಸೆಲ್ಫಿ, ಫೋಟೊ ಕ್ಲಿಕ್ಕಿಸಿಕೊಳ್ಳಲು ಅನುವು ಮಾಡಿಕೊಟ್ಟರು.

ತಾವು ಕಲಿತ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಭೇಟಿ ಮಾಡಿ ತಮ್ಮ ಶಾಲಾ ದಿನಗಳನ್ನು ನೆನಪಿಸಿಕೊಂಡರು. ವಿದ್ಯಾರ್ಥಿಗಳಿಗೆ ತಾವೂ ಮುಂದೊಂದು ದಿನ ನನ್ನಂತೆ, ಅಥವಾ ನನಗಿಂತಲೂ ದೊಡ್ಡದಾದ ಹುದ್ದೆಯನ್ನು ಅಲಂಕರಿಸುವಂತಾಗಬೇಕು ಎಂದು ಶುಭ ಹಾರೈಸಿದರು. ಸದ್ಯ ಸೀಬರ್ಡ್ ನೌಕಾನೆಲೆಗೆ ತೆರಳಿರುವ ಅವರು, ನಾಳೆ ಜಿಲ್ಲಾಧಿಕಾರಿ, ಮೀನುಗಾರರು, ಪತ್ರಕರ್ತರನ್ನು ಭೇಟಿಯಾಗಿ ಭಾನುವಾರ ಸಂಜೆ ವಾಪಸ್​ ಮುಂಬೈಗೆ ತೆರಳಲಿದ್ದಾರೆ.

ಇದನ್ನೂ ಓದಿ:Watch:-30 ಡಿಗ್ರಿ ತಾಪಮಾನದಲ್ಲಿ 65 ಪುಷ್-ಅಪ್ಸ್‌ ಹೊಡೆದ 55 ವರ್ಷದ ಯೋಧ

ABOUT THE AUTHOR

...view details