ಶಿರಸಿ/ಉತ್ತರ ಕನ್ನಡ: ಶನಿವಾರ ಮತ್ತು ಭಾನುವಾರ ಎರಡು ದಿನಗಳು ರಜೆ ಇರುವ ಕಾರಣ ಖಾತೆ ಹಂಚಿಕೆ ಆಗಿದ್ದರೂ ಬಹಿರಂಗ ಮಾಡಲು ಸಾಧ್ಯವಾಗಿಲ್ಲ. ಅದಕ್ಕಾಗಿ ಸೋಮವಾರ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಸೋಮವಾರ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡುತ್ತೇವೆ: ಸಿಎಂ ಬಿಎಸ್ವೈ - ಸಿಎಂ ಬಿಎಸ್ವೈ ಉತ್ತರ ಕನ್ನಡ ಭೇಟಿ
ಸೋಮವಾರ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ರು.
![ಸೋಮವಾರ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡುತ್ತೇವೆ: ಸಿಎಂ ಬಿಎಸ್ವೈ cm-bsy-statement-about-cabinet](https://etvbharatimages.akamaized.net/etvbharat/prod-images/768-512-6005419-thumbnail-3x2-murders.jpg)
ಉತ್ತರ ಕನ್ನಡ ಜಿಲ್ಲೆಯ ಬನವಾಸಿಯ ಕದಂಬೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಸಚಿವರು ಪ್ರಮಾಣ ವಚನ ತೆಗೆದುಕೊಂಡಿದ್ದಾರೆ. ಅವರಿಗೆ ಎರಡು ದಿನಗಳ ನಂತರ ಖಾತೆ ಹಂಚಿಕೆ ಮಾಡಲಾಗುತ್ತದೆ ಎಂದರು. ಶೀಘ್ರದಲ್ಲಿ ಅಧಿವೇಶನ ಆರಂಭವಾಗಲಿದೆ. ಮಾ.5 ರಂದು ಬಜೆಟ್ ಮಂಡನೆ ಆಗಲಿದ್ದು, ಇದು ಮಹತ್ವ ಪೂರ್ಣ ಬಜೆಟ್ ಆಗಲಿದೆ ಎಂದರು.
ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರ ಮಧ್ಯಂತರ ಚುನಾವಣೆ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ನವರದ್ದು ತಿರುಕನ ಕನಸಾಗಿದೆ. ಅವರ ಪ್ರತಿಕ್ರಿಯೆಗೆ ಏನೂ ಹೇಳುವುದಿಲ್ಲ. ಅವರು ವಾಸ್ತವಿಕ ಸಂಗತಿ ಅರಿತು ಮಾತನಾಡಬೇಕು. ಇಲ್ಲದೇ ಹೋದಲ್ಲಿ ಅವರಿಗೆ ಗೌರವ ಕಡಿಮೆ ಆಗುತ್ತದೆ ಎಂದ ಅವರು, 3 ವರ್ಷಗಳ ಕಾಲ ವಿರೋಧ ಪಕ್ಷದಲ್ಲಿ ಕೂತುಕೊಳ್ಳಬೇಕು ಎಂಬ ಕಾರಣದಿಂದ ಅವರು ಡೆಸ್ಪರೇಟ್ ಆಗಿ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಗೊಂದಲದ ಹೇಳಿಕೆ ನೀಡುತ್ತಿದ್ದಾರೆ ಎಂದರು.