ಶಿರಸಿ(ಉತ್ತರ ಕನ್ನಡ): ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದೇನೆ. ಪರಿಶೀಲನೆ ನಡೆಸಿದ ನಂತರ ಪರಿಹಾರ ಕಾರ್ಯಗಳನ್ನು ಸರ್ಕಾರದಿಂದ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಯಲ್ಲಾಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಲ್ಲಾಪುರದಲ್ಲಿ ಸಾಕಷ್ಟು ಪ್ರದೇಶದಲ್ಲಿ ಹಾನಿ ಸಂಭವಿಸಿದೆ. ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಅಗತ್ಯ ಪರಿಹಾರ ಕೆಲಸ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಕೇಂದ್ರದಿಂದ ಪ್ರವಾಹ ಪೀಡಿತ ವಿಶೇಷ ಪ್ಯಾಕೇಜ್ ವಿಚಾರವಾಗಿ ಮಾತನಾಡಿದ ಅವರು, ಕೇಂದ್ರದಿಂದ ಎನ್.ಡಿ.ಆರ್.ಎಫ್. ನಿಂದ ಪರಿಹಾರ ಬಂದಿದೆ. ಪ್ರವಾಹ ಪೀಡಿತ ಪ್ರದೇಶ ಎಲ್ಲಾ ಹಾನಿಯ ವರದಿಯನ್ನು ತರಿಸಿಕೊಂಡು ಹೆಚ್ಚಿನ ಪರಿಹಾರಕ್ಕಾಗಿ ಮನವಿ ಸಲ್ಲಿಸುವ ಬಗ್ಗೆ ಚರ್ಚೆ ನಡೆಸುತ್ತೇನೆ ಎಂದು ಸಿಎಂ ತಿಳಿಸಿದರು.
ಅರೆಬೈಲ್ ಘಟ್ಟಪ್ರದೇಶದ ಗುಡ್ಡಕುಸಿತ ಪರಿಶೀಲನೆ ಅರೆಬೈಲ್ ಘಟ್ಟಪ್ರದೇಶದ ಗುಡ್ಡಕುಸಿತ ಪರಿಶೀಲನೆ:
ಅಂಕೋಲಾ ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 63 ರ ಅರಬೈಲ್ ಘಟ್ಟದಲ್ಲಿ ಕುಸಿದ ಗುಡ್ಡವನ್ನು ಬೊಮ್ಮಾಯಿ ಪರಿಶೀಲನೆ ನಡೆಸಿದರು. ಯಲ್ಲಾಪುರದ ಕಳಚೆ ಗ್ರಾಮದಲ್ಲಿ ಗುಡ್ಡ ಕುಸಿತ ಪ್ರದೇಶಕ್ಕೆ ತೆರಳಿ ವೀಕ್ಷಣೆ ನಡೆಸಿ ಸ್ಥಳೀಯರಿಂದ ಮಾಹಿತಿ ಪಡೆದ ಅವರು ಬಳಿಕ ಅಂಕೋಲಾಗೆ ತೆರಳುವಾಗ ಮಾರ್ಗ ಮಧ್ಯೆದಲ್ಲಿ ಹೆದ್ದಾರಿಯಲ್ಲಿ ಕುಸಿತವಾದ ಪ್ರದೇಶಗಳನ್ನು ವೀಕ್ಷಣೆ ನಡೆಸಿದರು. ಅಲ್ಲದೆ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು ಬಳಿಕ ಅವರು ಅಂಕೋಲಾಗೆ ತೆರಳಿದ್ದಾರೆ.