ಕಾರವಾರ(ಉತ್ತರ ಕನ್ನಡ):ಒಂದೇ ದಿನ ಸುರಿದ ಮಳೆಗೆ ಮನೆ ಮೇಲೆ ಗುಡ್ಡ ಕುಸಿದು ನಾಲ್ವರು ಸಾವಿಗೀಡಾಗಿರುವ ಘಟನೆ ನಡೆದ ಉತ್ತರಕನ್ನಡ ಜಿಲ್ಲೆಯ ಭಟ್ಕಳದ ಮುಠಳ್ಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಭೇಟಿ ನೀಡಿ, ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಘಟನೆ ಸಂಭವಿಸಿದ ಪ್ರದೇಶಕ್ಕೆ ತೆರಳಿ ಮೃತ ಲಕ್ಷ್ಮೀ ನಾರಾಯಣ ನಾಯ್ಕ ಅವರ ಮನೆ ಇದ್ದ ಪ್ರದೇಶವನ್ನು ಅವರು ವೀಕ್ಷಿಸಿದರು. ಅಲ್ಲದೇ ಘಟನೆಯ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಅಧಿಕಾರಿಗಳಿಂದ ಮಾಹಿತಿ ಪಡೆದರು.
ಭಟ್ಕಳದಲ್ಲಿ ಮನೆ ಮೇಲೆ ಗುಡ್ಡ ಕುಸಿದು ದುರಂತ: ಸ್ಥಳ ವೀಕ್ಷಣೆ ಮಾಡಿದ ಸಿಎಂ ಬೊಮ್ಮಾಯಿ - ಭಟ್ಕಳದ ಮುಠಳ್ಳಿಗೆ ಸಿಎಂ ಭೇಟಿ
ಉತ್ತರಕನ್ನಡ ಜಿಲ್ಲೆಯ ಭಟ್ಕಳದ ಮುಠಳ್ಳಿಗೆ ಸಿಎಂ ಬೊಮ್ಮಾಯಿ ಭೇಟಿ ನೀಡಿ ಮನೆ ಮೇಲೆ ಗುಡ್ಡ ಕುಸಿತದಿಂದ ಮೃತಪಟ್ಟವರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಈ ದುರ್ಘಟನೆಯಲ್ಲಿ ಮನೆ ಮಾಲೀಕರಾದ ಲಕ್ಷ್ಮೀ ನಾರಾಯಣ ನಾಯ್ಕ (48), ಮಗಳು ಲಕ್ಷ್ಮೀ(33), ಮಗ ಅನಂತ ನಾರಾಯಣ ನಾಯ್ಕ (32) ಹಾಗೂ ಮನೆಯಲ್ಲಿ ರಾತ್ರಿ ಇರಲು ಬಂದಿದ್ದ ಸಂಬಂಧಿ 20 ವರ್ಷದ ಪ್ರವೀಣ್ ಮೃತಪಟ್ಟಿದ್ದರು. ಕಂದಾಯ ಸಚಿವ ಆರ್. ಅಶೋಕ್, ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ಶಾಸಕರಾದ ಸುನೀಲ್ ನಾಯ್ಕ, ರೂಪಾಲಿ ನಾಯ್ಕ, ದಿನಕರಶೆಟ್ಟಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಎಸ್ಪಿ ಸುಮ್ಮನ್ನಾ ಫೆನ್ನೇಕರ್ ಸಿಎಂ ಜತೆಗಿದ್ದರು.
ಇದನ್ನೂ ಓದಿ:ಭಟ್ಕಳದಲ್ಲಿ ಮನೆ ಮೇಲೆ ಕುಸಿದ ಗುಡ್ಡ; ಒಂದೇ ಕುಟುಂಬದ ನಾಲ್ವರು ಸಾವು