ಶಿರಸಿ: ವರ್ಷದ 365 ದಿನವೂ ಕಾರ್ಯ ನಿರ್ವಹಿಸಿ ,ನಗರದ ಸ್ವಚ್ಛತೆಯಲ್ಲಿ ವಿಶೇಷ ಕಾರ್ಯನಿರ್ವಹಿಸುವ ಪೌರಕಾರ್ಮಿಕರನ್ನು ಸನ್ಮಾನಿಸುವ ಮೂಲಕ ಪೌರಕಾರ್ಮಿಕ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಶಿರಸಿಯಲ್ಲಿ ವಿಶೇಷವಾಗಿ ಪೌರಕಾರ್ಮಿಕರ ದಿನಾಚರಣೆ.. - ಪೌರ ಕಾರ್ಮಿಕರಿಗೆ ಸಮ್ಮಾನ
ವರ್ಷದ 365 ದಿನವೂ ಕಾರ್ಯ ನಿರ್ವಹಿಸಿ ,ನಗರದ ಸ್ವಚ್ಛತೆಯಲ್ಲಿ ವಿಶೇಷ ಕಾರ್ಯನಿರ್ವಹಿಸುವ ಪೌರಕಾರ್ಮಿಕರನ್ನು ಸನ್ಮಾನಿಸುವ ಮೂಲಕ ಪೌರಕಾರ್ಮಿಕ ದಿನಾಚರಣೆಯನ್ನು ಶಿರಸಿಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಪೌರ ಕಾರ್ಮಿಕರಿಗೆ ಸಮ್ಮಾನ
ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಲ್ವರು ಪೌರ ಕಾರ್ಮಿಕರಿಗೆ ಅವರ ಪ್ರಾಮಾಣಿಕ ಹಾಗೂ ಪರಿಶ್ರಮದ ಕಾರ್ಯ ಗುರುತಿಸಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೆ ಶಿರಸಿ ವೃತ್ತ ನಿರೀಕ್ಷಕ ಬಿ.ಗಿರೀಶ ಚಾಲನೆ ನೀಡಿದರು.ಇನ್ನು ಕಾರ್ಯಕ್ರಮದಲ್ಲಿ ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ, ಮಾರಿಕಾಂಬಾ ದೇವಾಲಯದ ಆಡಳಿತ ಮಂಡಳಿ ಉಪಾಧ್ಯಕ್ಷ ಮನೋಹರ ಮಲ್ಮನೆ ಇದ್ದರು.