ಕಾರವಾರ:ಕ್ರಿಶ್ಚಿಯನ್ ಮತ ಪ್ರಚಾರದಲ್ಲಿ ತೊಡಗಿದ್ದಾರೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ 15 ಜನರನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಕಾರವಾರದಲ್ಲಿ ನಡೆದಿದೆ.
ಮತಾಂತರ ಆರೋಪ:15 ಆರೋಪಿಗಳು ಪೊಲೀಸ್ ವಶಕ್ಕೆ - KN_KWR_02_25_MATANTARA_7202800
ಕಾರವಾರ ನಗರದಲ್ಲಿ ಮತ ಪ್ರಚಾರದಲ್ಲಿ ತೊಡಗಿದ್ದಾರೆ ಎನ್ನಲಾದ ಗೋವಾ, ಅಸ್ಸಾಂ, ಉತ್ತರಕರ್ನಾಟಕ ಮೂಲದ ಯುವಕರನ್ನು ಸಾರ್ವಜನಿಕರು ನೀಡಿದ ದೂರಿನ ಮೇಲೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
![ಮತಾಂತರ ಆರೋಪ:15 ಆರೋಪಿಗಳು ಪೊಲೀಸ್ ವಶಕ್ಕೆ](https://etvbharatimages.akamaized.net/etvbharat/prod-images/768-512-3381742-thumbnail-3x2-kwr.jpg)
ಕಾರವಾರ ನಗರದಲ್ಲಿ ಮತ ಪ್ರಚಾರದಲ್ಲಿ ತೊಡಗಿದ ಗೋವಾ, ಅಸ್ಸಾಂ, ಉತ್ತರಕರ್ನಾಟಕ ಮೂಲದ ಯುವಕರು ಕ್ರಿಶ್ಚಿಯನ್ ಧರ್ಮಪ್ರಚಾರದ ಪುಸ್ತಕಗಳನ್ನು ಹಂಚುತ್ತಿದ್ದರು. ಅಲ್ಲದೇ ಮುಗ್ದರನ್ನು, ಯುವಕರನ್ನು ಟಾರ್ಗೆಟ್ ಮಾಡಿ ಅವರ ಬಳಿ ಹಿಂದು ದೇವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದರು ಎಂದು ಸಾರ್ವಜನಿಕರು ಪೊಲೀಸರಿಗೆ ದೂರು ನೀಡಿದ್ದರು.
ಬಳಿಕ ಸ್ಥಳಕ್ಕೆ ತೆರಳಿದ ಪೊಲೀಸರು ಕ್ರಿಶ್ಚಿಯನ್ ಧರ್ಮದ ಪರವಾಗಿ ಪ್ರಚಾರದಲ್ಲಿ ತೊಡಗಿದ್ದ ಸಂಗಮೇಶ, ದೀಪಕ, ಆಕಾಶ, ಆಶೀಸಕುಮಾರ, ರಾಜು, ರಾಜೇಶ, ಪರಶುರಾಮ, ದೌಹಾರೋ, ಪೋಸಿಸ್, ಶಕ್ತಿ ನಿರಂಜನ್, ಸಿಮಣ್ಯಪ್ಪ ಸೇರಿ ಇತರರನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ಮುಂದುವರಿಸಿದ್ದಾರೆ.