ಕರ್ನಾಟಕ

karnataka

ETV Bharat / state

ಗುಂಡಬಾಳಾ ನದಿಯಲ್ಲಿ ಬಿದ್ದು ಮಗು ನಾಪತ್ತೆ : ಮುಂದುವರೆದ ಶೋಧ ಕಾರ್ಯ - karwar

ಮಗು ನೀರಿಗೆ ಬಿದ್ದ ತಕ್ಷಣ ತಾಯಿ ಸಹಾಯಕ್ಕಾಗಿ ಕೂಗಿಕೊಂಡಿದ್ದು, ಸಮೀಪದಲ್ಲಿದ್ದ ಸ್ಥಳೀಯರು ನದಿಯಲ್ಲಿ ದೋಣಿಯೊಂದಿಗೆ ಹುಡುಕಾಟ ನಡೆಸಿದ್ದಾರೆ. ಆದರೆ, ಈವರೆಗೂ ಮಗು ಮಾತ್ರ ಪತ್ತೆಯಾಗಿಲ್ಲ..

karwar
ಹೊಳೆಗೆ ಬಿದ್ದು ಮಗು ನಾಪತ್ತೆ: ಮುಂದುವರೆದ ಶೋಧಕಾರ್ಯ

By

Published : Aug 1, 2021, 9:04 PM IST

ಕಾರವಾರ : ತಾಯಿಯೊಂದಿಗೆ ಬಟ್ಟೆ ತೊಳೆಯಲು ತೆರಳಿದ್ದ ಮಗುವೊಂದು ಆಟವಾಡುತ್ತಾ ಹೊಳೆಗೆ ಬಿದ್ದು ನಾಪತ್ತೆಯಾಗಿರುವ ಘಟನೆ ಹೊನ್ನಾವರ ತಾಲೂಕಿನ ಹುಡಗೋಡು ಗ್ರಾಮದಲ್ಲಿ‌ ಇಂದು ನಡೆದಿದೆ.

ಹೊಳೆಗೆ ಬಿದ್ದು ಮಗು ನಾಪತ್ತೆ : ಮುಂದುವರೆದ ಶೋಧಕಾರ್ಯ

ಒಂದೂವರೆ ವರ್ಷದ ಕಾರ್ತಿಕ ರಮೇಶ ನಾಯ್ಕ್ ಗುಂಡಬಾಳಾ ನದಿ ಪಾಲಾದ ದುರ್ದೈವಿ. ಇಂದು ಮಧ್ಯಾಹ್ನ ತಾಯಿ ಶ್ರುತಿ ಮಗುವನ್ನು ಕರೆದುಕೊಂಡು ಬಟ್ಟೆ ತೊಳೆಯಲು ಮನೆಯ ಸಮೀಪದ ಗುಂಡಬಾಳಾ ನದಿಯ ಬಳಿ ತೆರಳಿದ್ದರು. ತಾಯಿ ಬಟ್ಟೆ ತೊಳೆಯುತ್ತಿರುವಾಗ ಪಕ್ಕದಲ್ಲಿಯೇ ಆಟವಾಡಿಕೊಂಡಿದ್ದ ಮಗು ಆಕಸ್ಮಿಕವಾಗಿ ನದಿಯಲ್ಲಿ ಬಿದ್ದು ಕೊಚ್ಚಿಹೋಗಿದೆ ಎನ್ನಲಾಗ್ತಿದೆ.

ಮಗು ನೀರಿಗೆ ಬಿದ್ದ ತಕ್ಷಣ ತಾಯಿ ಸಹಾಯಕ್ಕಾಗಿ ಕೂಗಿಕೊಂಡಿದ್ದು, ಸಮೀಪದಲ್ಲಿದ್ದ ಸ್ಥಳೀಯರು ನದಿಯಲ್ಲಿ ದೋಣಿಯೊಂದಿಗೆ ಹುಡುಕಾಟ ನಡೆಸಿದ್ದಾರೆ. ಆದರೆ, ಈವರೆಗೂ ಮಗು ಮಾತ್ರ ಪತ್ತೆಯಾಗಿಲ್ಲ.

ಎಳೆಯ ಕಂದನನ್ನು ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲುಮುಟ್ಟಿದೆ. ಹೊನ್ನಾವರ ಠಾಣೆಯ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಮಗುವಿಗಾಗಿ ಹುಡುಕಾಟ ನಡೆಸಿದ್ದಾರೆ.

ABOUT THE AUTHOR

...view details