ಭಟ್ಕಳ:2 ವರ್ಷದ ಹಿಂದೆ ಕೂಲಿ ಕೆಲಸ ಅರಸಿ ನಗರಕ್ಕೆ ಬಂದಿದ್ದ ಚಿಕ್ಕಮಗಳೂರು ಮೂಲದ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಭಟ್ಕಳತಾಲೂಕಿನ ಜಾಲಿ ಪಂಚಾಯ್ತಿ ವ್ಯಾಪ್ತಿಯ ಶೇಡ್ಕುಳಿ ಹೊಂಡ ಎಂಬಲ್ಲಿ ಘಟನೆ ನಡೆದಿದೆ.
ಕೂಲಿ ಕೆಲಸವರಸಿ ಭಟ್ಕಳಕ್ಕೆ ಬಂದ ಯುವಕ ನೇಣಿಗೆ ಶರಣು - ನೇಣು ಹಾಕಿಕೊಂಡು ಸಾವು
ಭಟ್ಕಳ ತಾಲೂಕಿನ ಜಾಲಿ ಪಂಚಾಯ್ತಿ ವ್ಯಾಪ್ತಿಯ ಶೇಡ್ಕುಳಿ ಹೊಂಡ ಎಂಬುವಲ್ಲಿ ಯುವಕನೊರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಕೂಲಿಗಾಗಿ ಬಂದ ಯುವಕ ನೇಣಿಗೆ ಶರಣು
ಚಿಕ್ಕಮಗಳೂರು ಮೂಲದ ಶಿವುರಾಜ್(23) ಮೃತ ಯುವಕ. ಈತ ಮತ್ತು ಈತನ ಸಹೋದರ ಭಟ್ಕಳಕ್ಕೆ 2 ವರ್ಷದ ಹಿಂದೆ ಕೂಲಿ ಕೆಲಸಕ್ಕೆ ಬಂದಿದ್ದು, 3 ದಿನಗಳ ಹಿಂದೆಯಷ್ಟೇ ಈತನ ಸಹೋದರ ಮರಳಿ ಊರಿಗೆ ಹೋಗಿರುವುದು ತಿಳಿದು ಬಂದಿದೆ. ಆತ್ಮಹತೆಗೆ ಇನ್ನು ಯಾವುದೇ ಕಾರಣ ತಿಳಿದು ಬಂದಿಲ್ಲ.
ಸ್ಥಳಕ್ಕೆ ಭಟ್ಕಳ ಠಾಣೆಯ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೇ ಸಂಬಂಧಿಕರಿಗೆ ವಿಷಯ ತಿಳಿಸಿದ್ದು. ಮನೆಯವರು ಬರುವವವರೆಗೆ ಭಟ್ಕಳ ತಾಲೂಕಾಸ್ಪತ್ರೆಯಲ್ಲಿ ಮೃತದೇಹ ಇರಿಸಲಾಗುವುದು ಎಂದು ತಿಳಿದುಬಂದಿದೆ.