ಶಿರಸಿ:ಮುಖ್ಯಮಂತ್ರಿ ರಾಜೀನಾಮೆ ನೀಡಿದರೆ ಮಂತ್ರಿಮಂಡಲ ಮಾಜಿಯಾಗುತ್ತದೆ. ಹೊಸ ಮುಖ್ಯಮಂತ್ರಿ ಘೋಷಣೆಯೊಂದಿಗೆ ಮತ್ತೆ ನಾವು ಸಚಿವರಾಗುತ್ತೇವೆ. ಆದರೆ ಪ್ರಸ್ತುತ ಎದ್ದಿರುವ ಮುಖ್ಯಮಂತ್ರಿ ಬದಲಾವಣೆ ವಿಷಯ ಕೇವಲ ಊಹಾಪೋಹವಷ್ಟೇ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
ಮುಖ್ಯಮಂತ್ರಿ ಬದಲಾವಣೆ ಕೇವಲ ಊಹಾಪೋಹ ಅಷ್ಟೇ: ಸಚಿವ ಹೆಬ್ಬಾರ್ - ಮುಖ್ಯಮಂತ್ರಿ ರಾಜೀನಾಮೆ
ಯಡಿಯೂರಪ್ಪನವರ ಆಡಳಿತವನ್ನು ನೋಡಿಯೇ ನಾವು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದು. ಸದ್ಯ ಹರಡಿರುವ ಸಿಎಂ ಬದಲಾವಣೆ ಸುದ್ದಿ ಊಹಾಪೋಹ ಅಷ್ಟೇ ಎಂದು ಸಚಿವ ಶಿವರಾಮ ಹೆಬ್ಬಾರ್ ತಿಳಿಸಿದರು.
ಸಚಿವ ಹೆಬ್ಬಾರ್
ತಾಲೂಕಿನ ಗುಡ್ನಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ನಾಯಕತ್ವದ ಮೇಲಿನ ಭರವಸೆಯಿಂದಲೇ ನಾವು ಕಾಂಗ್ರೆಸ್ಗೆ ರಾಜೀನಾಮೆ ನೀಡಿದ್ದು. ಈಗ ನಾವ್ಯಾರು ಭರವಸೆ ಕಳೆದುಕೊಂಡಿಲ್ಲ. ರಾಜಕೀಯ ಜೀವನವೇ ಒಂದು ಸವಾಲು. ಆ ಸವಾಲನ್ನು ಹೇಗೆ ಎದುರಿಸಬೇಕೋ ಆಯಾ ಕಾಲಕ್ಕೆ ಸ್ವೀಕರಿಸಲಾಗುತ್ತದೆ ಎಂದರು.
ನಾಯಕತ್ವದ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳು ಹಲವು ಬಾರಿ ಮಾತನಾಡಿದ್ದು, ಹೈಕಮಾಂಡ್ ತೀರ್ಮಾನವೇ ಅಂತಿಮವಾಗಿದೆ. ಆದರೆ ಪೂರ್ಣ ಪ್ರಮಾಣದಲ್ಲಿ ಬಿಜೆಪಿ ಅಧಿಕಾರ ಮುಗಿಸಿ ಮತ್ತೊಮ್ಮೆ ಅಧಿಕಾರಕ್ಕೆ ಏರುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತದೆ ಎಂದರು.