ಕರ್ನಾಟಕ

karnataka

ETV Bharat / state

ಹಾರುವ ಬೆಕ್ಕು ಹಿಡಿಯಲು ಹೋಗಿ ಚಿರತೆ ಸಾವು! - cheetah cat died news

ಶೇವಾಳಿ ರಸ್ತೆಯ ಬಳಿ ಚಿರತೆ ಮತ್ತು ಹಾರುವ ಬೆಕ್ಕು ಸತ್ತು ಬಿದ್ದಿರುವುದು ಪತ್ತೆಯಾಗಿತ್ತು. ಈ ವೇಳೆ ಪರಿಶೀಲನೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ಹಾರುವ ಬೆಕ್ಕು ಹಿಡಿಯಲು ಹೋದಾಗ ಘಟನೆ ನಡೆದಿರಬಹುದೆಂದು ಶಂಕಿಸಲಾಗಿದೆ.‌

cheetah and cat died at karawara
ಹಾರುವ ಬೆಕ್ಕು ಹಿಡಿಯಲು ಹೋಗಿ ಚಿರತೆ ಸಾವು!

By

Published : Mar 24, 2021, 12:58 PM IST

ಕಾರವಾರ: ಹಾರುವ ಬೆಕ್ಕು ಹಿಡಿಯಲು ಹೋದ ಚಿರತೆಯೊಂದು ವಿದ್ಯುತ್ ತಂತಿ ಮೇಲೆ‌ ಬಿದ್ದು ಸಾವನ್ನಪ್ಪಿರುವ ಘಟನೆ ಜೊಯಿಡಾ ತಾಲೂಕಿನ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಗುಂದ ವನ್ಯಜೀವಿ ವಲಯದಲ್ಲಿ ನಡೆದಿದೆ. ಈ ವೇಳೆ ಬೆಕ್ಕು ಕೂಡ ಸಾವನ್ನಪ್ಪಿದೆ.

ತಾಲೂಕಿನ ಗುಂದ ವಲಯದ ತಮ್ಮಣಗಿ ಶಾಖೆಯ ಶೇವಾಳಿ ರಸ್ತೆಯ ಬಳಿ ಚಿರತೆ ಮತ್ತು ಹಾರುವ ಬೆಕ್ಕು ಸತ್ತು ಬಿದ್ದಿರುವುದು ಪತ್ತೆಯಾಗಿತ್ತು. ಈ ವೇಳೆ ಪರಿಶೀಲನೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ಹಾರುವ ಬೆಕ್ಕು ಹಿಡಿಯಲು ಹೋದಾಗ ಘಟನೆ ನಡೆದಿರಬಹುದೆಂದು ಶಂಕಿಸಲಾಗಿದೆ.‌ ಬಳಿಕ ಪಶು ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ್ದು, ಕಾನೂನಿನಂತೆ ಅಂತ್ಯಕ್ರಿಯೆ ನಡೆಸಲಾಗಿದೆ.

ಇದನ್ನೂ ಓದಿ:ವಿಜಯಪುರ: ಸಿಸಿ‌ ಕ್ಯಾಮರಾ ಧ್ವಂಸಗೊಳಿಸಿ ಮದ್ಯದಂಗಡಿ ಕಳ್ಳತನ

ಈ ವೇಳೆ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಮಾರಿಯಾ ಕ್ರಿಸ್ಟರಾಜು, ಎಸಿಎಫ್ ಕೆ.ಎಸ್. ಗೊರವರ, ಪಶು ವೈಧ್ಯಾಧಿಕಾರಿ ಡಾ. ಅರ್ಚನಾ ಸಿನ್ಹಾ, ವಲಯ ಅರಣ್ಯಾಧಿಕಾರಿ ವಿನೋದ ಅಂಗಡಿ, ರವಿ ಯಲ್ಲಾಪುರ ಮುಂತಾದವರು ಇದ್ದರು.

ABOUT THE AUTHOR

...view details