ಶಿರಸಿ: ನಿಗದಿತ ದರಕ್ಕಿಂತ ಹೆಚ್ಚಿನ ದರದ ಟಿಕೆಟ್ ನೀಡಿದ ಕೆಎಸ್ಆರ್ಟಿಸಿ ನಿರ್ವಾಹಕನ ವಿರುದ್ಧ ಪ್ರಯಾಣಿಕರೊಬ್ಬರು ದೂರು ನೀಡಿ, ಕ್ರಮ ಕೈಗೊಳ್ಳುವಂತೆ ಮನವಿ ಪತ್ರ ಸಲ್ಲಿಸಿದ್ದಾರೆ.
ಹೆಚ್ಚಿನ ದರದ ಟಿಕೆಟ್ ಕೊಟ್ಟ ಕಂಡಕ್ಟರ್: ಪ್ರಯಾಣಿಕನಿಂದ ದೂರು - Cheat on bus ticket prices
ಹೆಚ್ಚಿನ ದರದ ಟಿಕೆಟ್ ನೀಡಿದ ಕೆಎಸ್ಆರ್ಟಿಸಿ ನಿರ್ವಾಹಕನ ವಿರುದ್ಧ ಪ್ರಯಾಣಿಕರೊಬ್ಬರಿಂದ ದೂರು.
![ಹೆಚ್ಚಿನ ದರದ ಟಿಕೆಟ್ ಕೊಟ್ಟ ಕಂಡಕ್ಟರ್: ಪ್ರಯಾಣಿಕನಿಂದ ದೂರು Cheat on bus ticket prices in shirasi](https://etvbharatimages.akamaized.net/etvbharat/prod-images/768-512-5725127-thumbnail-3x2-srs.jpg)
ಕೆಎಸ್ಆರ್ಟಿಸಿ ಡಿಪೋ ಕಚೇರಿಯಲ್ಲಿ ದೂರು ದಾಖಲಿಸಲಾಗಿದೆ. ಜಡೆಯಿಂದ ಶಿರಸಿಗೆ 40 ರೂ. ತೆಗೆದುಕೊಳ್ಳುವ ಬದಲಾಗಿ 100 ರೂ. ದರದ ಟಿಕೆಟ್ ನೀಡಿದ್ದಾರೆ. ಇದನ್ನು ಪ್ರಯಾಣಿಕ ಮಂಜುನಾಥ ಗೋಣುರು ಪ್ರಶ್ನಿಸಿದ್ದರು. ಇದಕ್ಕೆ ಗರಂ ಆದ ನಿರ್ವಾಹಕ ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವಮಾನಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
2214 ಸಿಆರ್ ನಂಬರ್ನ ಸಿಬ್ಬಂದಿ ಮೇಲೆ ದೂರು ದಾಖಲಿಸಲಾಗಿದೆ. ಬಸ್ನಿಂದ ಇಳಿದ ಪ್ರಯಾಣಿಕರ ಟಿಕೆಟ್ನ್ನು ನೀಡಿ ಇಲಾಖೆಗೆ ವಂಚಿಸುತ್ತಿರುವ ಕಂಡಕ್ಟರ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಇಲಾಖೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ಸಿಬ್ಬಂದಿ ವಿರುದ್ಧ ನ್ಯಾಯಾಲಯಕ್ಕೆ ದೂರು ನೀಡುತ್ತೇನೆ ಎಂದು ಪ್ರಯಾಣಿಕರ ಮಂಜುನಾಥ ಗೋಣುರು ಎಚ್ಚರಿಕೆ ನೀಡಿದ್ದಾರೆ.