ಕರ್ನಾಟಕ

karnataka

ETV Bharat / state

ಕಸ್ತೂರಿ ರಂಗನ್ ವರದಿ ಜಾರಿಗೆ ಕೇಂದ್ರ ಸರ್ಕಾರ ತೀರ್ಮಾನ, ಲಾಭ- ನಷ್ಟ ಕುರಿತು ಚರ್ಚೆ..! - ಕಸ್ತೂರಿ ರಂಗನ್ ವರದಿ ಜಾರಿ ಪಶ್ಚಿಮ ಘಟ್ಟ ಪ್ರದೇಶ

ಈಗಾಗಲೇ ಗಾಡ್ಗಿಲ್ ವರದಿಯನ್ನ ಸರ್ಕಾರಗಳು ಜಾರಿಗೆ ತರಲು ಹಿಂದೇಟು ಹಾಕಿದ್ದವು. ಕಸ್ತೂರಿ ರಂಗನ್ ವರದಿಯನ್ನಾದರೂ ಯಥಾವತ್ ಜಾರಿಗೆ ತನ್ನಿ, ಇದರಿಂದ ಜನರಿಗೆ ಏನೂ ತೊಂದರೆಯಾಗಲ್ಲ. ಜನಗಳ ತೊಂದರೆಯನ್ನೇ ಮುಂದಿಟ್ಟುಕೊಂಡು ಹೋದರೆ ಪರಿಸರಕ್ಕೆ ಆಗೋ ಹಾನಿಗಳ ಬಗ್ಗೆ ಕೇಳೋರು ಯಾರೂ ಇರಲ್ಲ. ಮುಂದೊಂದು ದಿನ ಪಶ್ಚಿಮ ಘಟ್ಟ ಸಂಪೂರ್ಣವಾಗಿ ನಾಮಾವಶೇಷವಾಗೋ ಸಂದರ್ಭ ಬಂದರೂ ಆಶ್ಚರ್ಯವಿಲ್ಲ ಎನ್ನುತ್ತಾರೆ ಪರಿಸರವಾದಿಗಳು.

central-government-decision-to-implement-kasturi-rangan-report-news
ಕಸ್ತೂರಿ ರಂಗನ್ ವರದಿ ಜಾರಿಗೆ ಕೇಂದ್ರ ಸರ್ಕಾರ ತೀರ್ಮಾನ, ಲಾಭ ಮತ್ತು ನಷ್ಟದ ಕುರಿತು ಚರ್ಚೆ..!

By

Published : Oct 27, 2020, 7:03 PM IST

ಶಿರಸಿ:ಪಶ್ಚಿಮ ಘಟ್ಟಗಳು ದೇಶದಲ್ಲಿಯೇ ಅತಿ ವಿಶೇಷ ಹಾಗೂ ವಿರಳ ಜೀವವೈವಿಧ್ಯದ ಗಣಿಯನ್ನು ಹೊಂದಿದ ಪ್ರದೇಶ ಆಗಿದೆ. ಇಂತಹ ಪಶ್ಚಿಮ ಘಟ್ಟವನ್ನ ಉಳಿಸಬೇಕು ಎನ್ನುವ ಕಾರಣಕ್ಕೆ ಸರ್ಕಾರಕ್ಕೆ ಕಸ್ತೂರಿ ರಂಗನ್ ವರದಿಯನ್ನು ಸಲ್ಲಿಸಲಾಗಿದೆ. ಈ ವರದಿ ಜಾರಿಗೆ ತರಲು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಲು ಚಿಂತನೆ ನಡೆಸುತ್ತಿದೆ. ಆದರೆ ಇದರಿಂದ ಇಲ್ಲಿನ ಕಾಡುಗಳಲ್ಲಿ ವಾಸ ಮಾಡುವ ಜನರಿಗೆ ತೊಂದರೆ ಆಗಲಿದೆ ಎಂಬ ಬಲವಾದ ಕೂಗು ಇದ್ದು, ವರದಿಯ ಲಾಭ ಮತ್ತು ನಷ್ಟದ ಕುರಿತು ಚರ್ಚೆ ನಡೆಯುತ್ತಿದೆ.

ಕಸ್ತೂರಿ ರಂಗನ್ ವರದಿ ಜಾರಿಗೆ ಕೇಂದ್ರ ಸರ್ಕಾರ ತೀರ್ಮಾನ, ಲಾಭ ಮತ್ತು ನಷ್ಟದ ಕುರಿತು ಚರ್ಚೆ..!

ಕಸ್ತೂರಿ ರಂಗನ್ ವರದಿ ಜಾರಿಗೆ ಬಂದರೆ, ಘಟ್ಟದ ವ್ಯಾಪ್ತಿಯಲ್ಲಿರೋ ಅನೇಕ ಗ್ರಾಮಗಳ ಜನರು ನಿರಾಶ್ರಿತರಾಗೋ ಆತಂಕ ಎದುರಾಗಿದೆ. ಇದರಿಂದ ಬಾಧಿತವಾಗೋ ಜಿಲ್ಲೆಗಳಲ್ಲಿ ಉತ್ತರ ಕನ್ನಡ 626 ಗ್ರಾಮಗಳೊಂದಿಗೆ ಮೊದಲ ಸ್ಥಾನದಲ್ಲಿದೆ. 2ನೇ ಸ್ಥಾನದಲ್ಲಿರೋ ಶಿವಮೊಗ್ಗದ 484 ಗ್ರಾಮಗಳು ನಿರಾಶ್ರಿತ ಗ್ರಾಮಗಳಾಗಲಿವೆ. ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ಅತ್ಯಧಿಕ ಗ್ರಾಮಗಳು ನಿರಾಶ್ರಿತವಾಗಲಿವೆ. ಇದರಲ್ಲಿ ಶಿರಸಿಯ 125, ಸಿದ್ದಾಪುರದ 107, ಯಲ್ಲಾಪುರದ 87, ಜೋಯಿಡಾ ವ್ಯಾಪ್ತಿಯ 110 ಗ್ರಾಮಗಳು ಸೇರಿವೆ.

ಈ ವರದಿಯ ವ್ಯಾಪ್ತಿಗೆ ಬರೋ 1553 ಹಳ್ಳಿಗಳ ಬದಲು 850 ಹಳ್ಳಿಗಳಿಗಾದರೂ ಸೀಮಿತಗೊಳಿಸೋ ಪ್ರಸ್ತಾಪವನ್ನ ಹಿಂದಿನ ಸರ್ಕಾರ ಕೇಂದ್ರಕ್ಕೆ ಕಳುಹಿಸಿತ್ತು. ಅದಕ್ಕಾದರೂ ಅವಕಾಶವನ್ನ ಕೊಡಿ ಎಂದು, ಈಗಿನ ಸರ್ಕಾರ ಕೇಂದ್ರವನ್ನ ಕೇಳಬೇಕಿದೆ. ವರದಿ ಜಾರಿಯ ಮ್ಯಾಪ್ ಗೆ ಮುನ್ನ ಸಂಸದರು ಹಾಗೂ ಶಾಸಕರ ನಿಯೋಗ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕಿದೆ. ಈಗಾಗಲೇ ಕೇರಳ ಸರ್ಕಾರ ಕೂಡ ಇದೆ ರೀತಿಯ ಮನವಿಯನ್ನ ಮಾಡಿ ಗ್ರಾಮಗಳ ಜನರನ್ನ ಉಳಿಸಿಕೊಳ್ಳುವಲ್ಲಿ ಯಶಸ್ವಿ ಕೂಡ ಆಗಿದೆ.

ಇನ್ನು ಡಿಸೆಂಬರ್ 31 ರೊಳಗಾಗಿ ವರದಿ ಜಾರಿಯ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಬೇಕು ಎಂದು ಹಸಿರು ನ್ಯಾಯಾಧೀಕರಣ ಪೀಠ ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಖಡಕ್ ಆದೇಶ ನೀಡಿದೆ. ಇನ್ನೊಂದೆಡೆ ವರದಿಯು ಯಥಾವತ್ತಾಗಿ ಜಾರಿಯಾಗಲೇಬೇಕು ಎಂದು ಪರಿಸರವಾದಿಗಳು ಪಟ್ಟು ಹಿಡಿದಿದ್ದಾರೆ. ವರದಿಯ ಯಥಾವತ್ ಜಾರಿಯಿಂದ ಪಶ್ಚಿಮ ಘಟ್ಟಕ್ಕೆ ಬರುವ ಆಪತ್ತು ಮಾಯವಾಗುತ್ತೆ. ಈಗಾಗಲೇ ಗಾಡ್ಗಿಲ್ ವರದಿಯನ್ನ ಸರ್ಕಾರಗಳು ಜಾರಿಗೆ ತರಲು ಹಿಂದೇಟು ಹಾಕಿದ್ದವು. ಕಸ್ತೂರಿ ರಂಗನ್ ವರದಿಯನ್ನಾದರೂ ಯಥಾವತ್ ಜಾರಿಗೆ ತನ್ನಿ, ಇದರಿಂದ ಜನರಿಗೆ ಏನೂ ತೊಂದರೆಯಾಗಲ್ಲ. ಜನಗಳ ತೊಂದರೆಯನ್ನೇ ಮುಂದಿಟ್ಟುಕೊಂಡು ಹೋದರೆ ಪರಿಸರಕ್ಕೆ ಆಗೋ ಹಾನಿಗಳ ಬಗ್ಗೆ ಕೇಳೋರು ಯಾರೂ ಇರಲ್ಲ. ಮುಂದೊಂದು ದಿನ ಪಶ್ಚಿಮ ಘಟ್ಟ ಸಂಪೂರ್ಣವಾಗಿ ನಾಮಾವಶೇಷವಾಗೋ ಸಂದರ್ಭ ಬಂದರೂ ಆಶ್ಚರ್ಯವಿಲ್ಲ ಎನ್ನುತ್ತಾರೆ ಪರಿಸರವಾದಿಗಳು.

ಒಟ್ಟಿನಲ್ಲಿ ಕಸ್ತೂರಿ ರಂಗನ್ ವರದಿ ಜಾರಿ ಪಶ್ಚಿಮ ಘಟ್ಟ ಪ್ರದೇಶದ ಜನರ ಎದೆ ಬಡಿತವನ್ನ ಹೆಚ್ಚಿಸಿದೆ. ಎಷ್ಟೋ ಗ್ರಾಮಗಳು ಹೆಸರಿಲ್ಲದಂತೆ ಹೋಗೋ ಸಂದರ್ಭವನ್ನ ಎದುರಿಸಬೇಕಿದೆ. ಜಾರಿ ವರದಿಯ ಬಗ್ಗೆ ಪರ ವಿರೋಧದ ಚರ್ಚೆಗಳು ತಾರಕಕ್ಕೇರಿವೆ. ಆದರೆ ಈ ಕುರಿತು ಜನಪ್ರತಿನಿಧಿಗಳು ಈಗಾದರೂ ತುರ್ತಾಗಿ ಸ್ಪಂದಿಸೋ ಅಗತ್ಯವಿದೆ. ಪಶ್ಚಿಮ ಘಟ್ಟವನ್ನು ಉಳಿಸಿಕೊಳ್ಳುವ ಜೊತೆಗೆ ಅದರ ಜೊತೆ ಸಂಬಂಧವನ್ನು ಹೊಂದಿರೋ ಗ್ರಾಮಗಳನ್ನೂ ಉಳಿಸುವುದರ ಮೂಲಕ ಕಾಡಿನ ಹಾಗೂ ನಾಡಿನ ಬದುಕನ್ನ ಹಸನುಗೊಳಿಸಬೇಕಿದೆ.

ABOUT THE AUTHOR

...view details