ಕರ್ನಾಟಕ

karnataka

ETV Bharat / state

ಹೊನ್ನಾವರ: ಲಂಚ ಪಡೆಯುತ್ತಿರುವಾಗಲೇ ಸಿಬಿಐ ಬಲೆಗೆ ಬಿದ್ದ ಐಟಿ ಅಧಿಕಾರಿ - CBI raids on IT officer

ಹೊನ್ನಾವರ ಬಂದರು ರಸ್ತೆಯಲ್ಲಿರುವ ಅಬಕಾರಿ ಮತ್ತು ಜಿಎಸ್‌ಟಿ ಕಚೇರಿಯ ಅಧಿಕಾರಿ ಜೀತೇಂದ್ರ ದಾಗೂರು ಲಂಚ ಪಡೆಯುತ್ತಿದ್ದ ವೇಳೆ ಸಿಬಿಐ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.

CBI raids on IT officer in Honnavar
ಸಿಬಿಐ ದಾಳಿ

By

Published : Mar 27, 2021, 5:35 PM IST

ಕಾರವಾರ:ಲಂಚ ಪಡೆಯುತ್ತಿದ್ದ ವೇಳೆ ಅಬಕಾರಿ ಮತ್ತು ಜಿಎಸ್‌ಟಿ ಅಧೀಕ್ಷಕ ಸಿಬಿಐ ಬಲೆಗೆ ಬಿದ್ದ ಘಟನೆ ಹೊನ್ನಾವರದಲ್ಲಿ ನಡೆದಿದೆ.

ಹೊನ್ನಾವರ ಬಂದರು ರಸ್ತೆಯಲ್ಲಿರುವ ಅಬಕಾರಿ ಮತ್ತು ಜಿಎಸ್‌ಟಿ ಕಚೇರಿಯ ಅಧಿಕಾರಿ ಜೀತೇಂದ್ರ ದಾಗೂರು ಲಂಚ ಪಡೆಯುತ್ತಿದ್ದ ವೇಳೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ ಖೆಡ್ಡಾಕ್ಕೆ ಕೆಡವಿದ್ದಾರೆ.

2015-16ನೇ ಸಾಲಿನ ಆದಾಯ ತೆರಿಗೆ ಮರು ಪಾವತಿಯಲ್ಲಿ 37 ಸಾವಿರ ರೂ. ಏರುಪೇರಾದ ಹಿನ್ನೆಲೆಯಲ್ಲಿ ಸರಿಪಡಿಸಲು ಜೀತೇಂದ್ರ ದಾಗೂರು ಅವರು ಜಗದೀಶ ಭಾವೆ ಎನ್ನುವವರಿಂದ 50 ಸಾವಿರ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದರು‌ ಎನ್ನಲಾಗ್ತಿದೆ.

ಈ ಸಂಬಂಧ ಜಗದೀಶ ಅವರು ಸಿಬಿಐಗೆ ದೂರು ಸಲ್ಲಿಸಿದ್ದರು. ಇಂದು ಕಚೇರಿಯಲ್ಲಿಯೇ ಲಂಚ ಸ್ವೀಕರಿಸುತ್ತಿದ್ದ ವೇಳೆ ಜೀತೇಂದ್ರ ಅವರನ್ನು ಕೇಂದ್ರ ಸಿಬಿಐ ತಂಡ ವಶಕ್ಕೆ ಪಡೆದಿದ್ದಾರೆ.

ಓದಿ:ಫೈಬರ್​​​ ಕೇಬಲ್​​ ಅವ್ಯವಹಾರ ಶಂಕೆ : ವಿಜಯಪುರ ಬಿಎಸ್​ಎನ್​ಎಲ್ ಕಚೇರಿ ಮೇಲೆ ಸಿಬಿಐ ದಾಳಿ

ABOUT THE AUTHOR

...view details