ಕಾರವಾರ:ಗೇರುಬೀಜ ಸಂಸ್ಕರಣಾ ಪ್ಯಾಕ್ಟರಿಯನ್ನು ಏಕಾಏಕಿ ಬಂದ್ ಮಾಡಿ ಕಳೆದ ಒಂದು ವಾರದಿಂದ ಕಾರ್ಮಿಕರ ಪ್ರತಿಭಟನೆ ಎದುರಿಸುತ್ತಿರುವ ಕುಮಟಾದ ರಿಲೇಬಲ್ ಕ್ಯಾಶ್ಯೂ ಕಂಪನಿಯು ತನ್ನ ಹಠಮಾರಿ ಧೋರಣೆ ಮುಂದುವರಿಸಿದ್ದು, ಪರಿಣಾಮ ಕಾರ್ಮಿಕರು ಹಾಗೂ ಕಂಪನಿ ಅಧಿಕಾರಿಗಳ ಜತೆ ಕಾರ್ಮಿಕ ಇಲಾಖೆ ನಡೆಸಿದ ಸಂಧಾನ ಸಭೆ ವಿಫಲಗೊಂಡಿದ್ದು, ಪರಿಣಾಮ ಕಾರ್ಮಿಕರು ಧರಣಿ ಮುಂದುವರೆಸಿದ್ದಾರೆ.
ಫ್ಯಾಕ್ಟರಿಯಲ್ಲಿ 8 ಗಂಟೆ ಕಾಲಾವಧಿಯಲ್ಲಿ ದಿನಕ್ಕೆ ನಡೆಯುತ್ತಿದ್ದ 3 ಪಾಳಿಗಳನ್ನು ಇತ್ತೀಚೆಗೆ ಆಡಳಿತ ಮಂಡಳಿಯವರು 2 ಪಾಳಿಯನ್ನು ನಡೆಸಲು ಚಿಂತನೆ ನಡೆಸಿದ್ದಾರೆ. ಈ ಬಗ್ಗೆ ಯಾವ ಕಾರ್ಮಿಕರಿಗೂ ತಿಳಿಸದೇ ಕೆ.ಜಿ ಲೆಕ್ಕದಲ್ಲಿ ಕೆಲಸವನ್ನು ನೀಡುವ ಬಗ್ಗೆ ನೋಟೀಸ್ ಬೋರ್ಡಿಗೆ ಅಂಟಿಸಿದ್ದರು. ಇದರಿಂದ ಗೊಂದಲಕ್ಕೀಡಾದ ಕಾರ್ಮಿಕರು ಆಡಳಿತ ಮಂಡಳಿಯೊಂದಿಗೆ ಚರ್ಚೆಗೆ ಮುಂದಾಗಿದ್ದು, ಆದರೆ ಇದಕ್ಕೆ ಅವಕಾಶ ನೀಡದೇ ನಿಮಗೆ ಆದರೆ ಕೆಲಸ ಮಾಡಿ. ಇಲ್ಲವಾದರೆ ಬಿಟ್ಟು ಹೋಗಬಹುದೆಂದು ಸೂಚಿಸಿದ್ದಾರೆ.
ಆದರೆ ಈ ಹಠಮಾರಿ ಧೋರಣೆಗೆ ಕಾರ್ಮಿಕರು ಕಳೆದ ಒಂದು ವಾರದಿಂದ ನಿರಂತರವಾಗಿ ಧರಣಿ ನಡೆಸಿ ತಮಗೆ ನ್ಯಾಯ ಒದಗಿಸುವಂತೆ ಕಂಪನಿ ಮಾಲೀಕರು ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಒತ್ತಾಯಿಸಿದ್ದರು.