ಕಾರವಾರ: ಕೊರೊನಾ ಪಾಸಿಟಿವ್ ಆಗಿದ್ದರೂ ಖಾಸಗಿ ರಕ್ತ ತಪಾಸಣಾ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವನ ಪೊಲೀಸರು ಪ್ರಕರಣ ದಾಖಲಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಡೆದಿದೆ.
ಪಟ್ಟಣದಲ್ಲಿ ರಕ್ತ ತಪಾಸಣಾ ಕೇಂದ್ರ ಹೊಂದಿರುವ ವಿನಾಯಕ ವಸಂತ ನಾಯ್ಕ ಎಂಬಾತನೇ ಕೊವಿಡ್ ನಿಯಮಾವಳಿ ಉಲ್ಲಂಘಿಸಿದವನಾಗಿದ್ದಾನೆ. ಈತ ಸ್ವತ ಕೋವಿಡ್ ಪಾಸಿಟಿವ್ ಆಗಿದ್ದು 14 ದಿನ ಕಡ್ಡಾಯವಾಗಿ ಹೋಮ್ ಐಸೋಲೇಷನ್‌ನಲ್ಲಿರಬೇಕಾಗಿತ್ತು. ಆದರೆ ವಿನಾಯಕ್ ಹಾಗೆ ಮಾಡದೇ ರಕ್ತ ತಪಾಸಣಾ ಕೇಂದ್ರವನ್ನು ತೆರೆದದ್ದು ಮಾತ್ರವಲ್ಲದೇ, ರಸ್ತೆಯಲ್ಲಿಯೂ ಓಡಾಡುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿತ್ತು ಎನ್ನಲಾಗಿದೆ.