ಕರ್ನಾಟಕ

karnataka

ETV Bharat / state

ನಿಯಂತ್ರಣ ತಪ್ಪಿ ಕಾರು ಪಲ್ಟಿ : ಇಬ್ಬರು ಸ್ಥಳದಲ್ಲೇ ಸಾವು, ಐವರ ಸ್ಥಿತಿ ಗಂಭೀರ - ಕಾರವಾರದ ಹಳಗಾ ಬಳಿ ಕಾರು ಪಲ್ಟಿ

ಬೆಂಗಳೂರಿನಿಂದ ರೋಗಿಯೊಬ್ಬರನ್ನು ಚಿಕಿತ್ಸೆಗೆ ಕರೆತಂದವರು ವಾಪಸಾಗುತ್ತಿದ್ದ ವೇಳೆ ಕಾರವಾರ ಬಳಿ ಕಾರು ಪಲ್ಟಿಯಾಗಿದೆ. ಈ ವೇಳೆ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಐವರ ಸ್ಥಿತಿ ಗಂಭೀರವಾಗಿದೆ.

Car over turned in Karwar two died Five Injured
ಕಾರವಾರದಲ್ಲಿ ನಿಯಂತ್ರಣ ತಪ್ಪಿ ಕಾರು ಪಲ್ಟಿ

By

Published : Apr 17, 2021, 1:41 PM IST

ಕಾರವಾರ : ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಕದ್ರಾದ ಭೈರೆ ಸಮೀಪದ ತಿರುವಿನಲ್ಲಿ ಸಂಭವಿಸಿದೆ.

ತಾಲೂಕಿನ ಹಳಗಾ ಸೇಂಟ್ ಮೇರಿ ಪ್ಯಾರಾಲಿಸಿಸ್ ಆಸ್ಪತ್ರೆಗೆ ಬೆಂಗಳೂರಿನಿಂದ ರೋಗಿಯೊಬ್ಬರನ್ನು ಕರೆತಂದಿದ್ದವರು ಚಿಕಿತ್ಸೆ ಬಳಿಕ ವಾಪಸಾಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ.

ಓದಿ : ಆಸ್ತಿ ಕಲಹ: ಅಣ್ಣನ ಮಗನಿಂದಲೇ ಚಿಕ್ಕಪ್ಪನ ಕೊಲೆ!

ಕಾರಲ್ಲಿ ಒಟ್ಟು ಏಳು ಮಂದಿ ಪ್ರಯಾಣಿಸುತ್ತಿದ್ದರು. ಈ ಪೈಕಿ ಚಾಲಕ ಸೈಯದ್ ಹಾಗೂ ತಾಯವ್ವ ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೋರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ. ಉಳಿದ ಐವರನ್ನು ಕಾರವಾರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ABOUT THE AUTHOR

...view details