ಕಾರವಾರ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕಲ್ಲು ಕ್ವಾರಿ ಹೊಂಡಕ್ಕೆ ಬಿದ್ದು ವ್ಯಕ್ತಿಯೋರ್ವ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕುಮಟಾ ತಾಲೂಕಿನ ಗೋಕರ್ಣದ ಚೌಡಗೇರಿ ಬಳಿ ಬುಧವಾರ ತಡರಾತ್ರಿ ನಡೆದಿದೆ.
ನಿಯಂತ್ರಣ ತಪ್ಪಿ ಕಲ್ಲು ಕ್ವಾರಿ ಹೊಂಡಕ್ಕೆ ಬಿದ್ದ ಕಾರು: ವ್ಯಕ್ತಿ ಸಾವು - ಕಾರವಾರ ಅಪಘಾತ ಸುದ್ದಿ
ಕಲ್ಲು ಕ್ವಾರಿ ಹೊಂಡಕ್ಕೆ ಕಾರು ಬಿದ್ದು ವ್ಯಕ್ತಿಯೋರ್ವ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕುಮಟಾ ತಾಲೂಕಿನ ಗೋಕರ್ಣದ ಚೌಡಗೇರಿ ಬಳಿ ಬುಧವಾರ ತಡರಾತ್ರಿ ನಡೆದಿದೆ. ಗೌರವ್ ದೇವರಾಯ್ ಗೋಳಿಕಟ್ಟಿ (25) ಮೃತ ವ್ಯಕ್ತಿ.
ಕುಮಟಾ ತಾಲೂಕಿನ ಅಗ್ರಗೋಣ ಮೂಲದ ಗೌರವ್ ದೇವರಾಯ್ ಗೋಳಿಕಟ್ಟಿ (25) ಮೃತ ವ್ಯಕ್ತಿ. ತಡರಾತ್ರಿ ಕಾರು ಚಲಾಯಿಸಿಕೊಂಡು ಬರುವಾಗ ಕಾರು ನಿಯಂತ್ರಣ ತಪ್ಪಿ ಪಕ್ಕದಲ್ಲಿದ್ದ ಕಲ್ಲು ಕ್ವಾರಿ ಹೊಂಡಕ್ಕೆ ಬಿದ್ದಿದೆ. ಹೊಡದಲ್ಲಿ ನೀರು ತುಂಬಿಕೊಂಡಿದ್ದು, ಕಾರಿನಲ್ಲಿದ್ದ ಇತರೆ ಮೂವರು ಈಜಿಕೊಂಡು ಹೊರ ಬಂದಿದ್ದಾರೆ. ಆದರೆ ಚಾಲಕ ಗೌರವ್ ಸೀಟ್ ಬೆಲ್ಟ್ ಹಾಕಿಕೊಂಡ ಪರಿಣಾಮ ಮೇಲೆ ಬರಲಾಗದೆ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಕ್ರೇನ್ ಮೂಲಕ ಕಾರು ಹಾಗೂ ಮೃತದೇಹವನ್ನು ಮೇಲೆತ್ತಿದ್ದಾರೆ. ಈ ಬಗ್ಗೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.