ಕರ್ನಾಟಕ

karnataka

ETV Bharat / state

ಆ ನಾಲ್ವರ ಅದೃಷ್ಟ ಚೆನ್ನಾಗಿತ್ತು.. ಕಾರಿನ ನಾಲ್ಕೂ ಚಕ್ರಗಳು ಮೇಲಾಗಿದ್ವು.. - ಕುಮಟಾ ಪೊಲೀಸ್ ಠಾಣೆ

ರಸ್ತೆ ಬದಿಯ ತಡೆಗೋಡೆಗೆ ಕಾರು ಗುದ್ದಿದ ಪರಿಣಾಮ ನಾಲ್ಕು ಚಕ್ರಗಳು ಮೇಲಾಗಿ ಬಿದ್ದಿದ್ದು, ಅದೃಷ್ಟವಶಾತ್​ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಕುಮಟಾ ತಾಲೂಕಿನ ಕತಗಾಲ್​ನ ಅಳ್ಕೋಡ ಸಮೀಪ ನಡೆದಿದೆ.

ಕಾರು ಅಪಘಾತ

By

Published : Oct 6, 2019, 5:33 PM IST

ಕಾರವಾರ: ರಸ್ತೆ ಬದಿಯ ತಡೆಗೋಡೆಗೆ ಕಾರು ಗುದ್ದಿದ ಪರಿಣಾಮ ನಾಲ್ಕು ಚಕ್ರಗಳು ಮೇಲಾಗಿ ಬಿದ್ದಿದ್ದು, ಅದೃಷ್ಟವಶಾತ್​ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಕುಮಟಾ ತಾಲೂಕಿನ ಕತಗಾಲ್​ನ ಅಳ್ಕೋಡ ಸಮೀಪ ನಡೆದಿದೆ.

ಪ್ರವಾಸಕ್ಕೆಂದು ಬಂದಿದ್ದ ಆಂಧ್ರ ಮೂಲದ ನಾಲ್ವರು ಪ್ರವಾಸಿಗರು ಕುಮಟಾ, ಶಿರಸಿ ಹೆದ್ದಾರಿ ಮೂಲಕ ತೆರಳುವಾಗ ಅಳ್ಕೋಡ ಬಳಿ ಈ ಅಪಘಾತ ಸಂಭವಿಸಿದೆ. ಈ ವೇಳೆ ಕಾರು ಉಲ್ಟಾ ಬಿದ್ದಿದ್ದು, ಇಬ್ಬರು ಮಹಿಳೆಯರು ಸೇರಿದಂತೆ ಮತ್ತಿಬ್ಬರು ಸವಾರರಿಗೆ ಚಿಕ್ಕಪುಟ್ಟ ಗಾಯಗಳಾಗಿದೆ. ಇನ್ನು, ಗಾಯಳುಗಳನ್ನು ಪೊಲೀಸರು ರಕ್ಷಣೆ ಮಾಡಿ ಕುಮಟಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.

ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details