ಕರ್ನಾಟಕ

karnataka

ETV Bharat / state

ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳ ಪರಮಾಧಿಕಾರ: ಸಚಿವ ಹೆಬ್ಬಾರ್ - ಸಂಪುಟ ಪುನಾರಚನೆ ಸುದ್ದಿ

ಸಂಪುಟ ಪುನಾರಚನೆ ಕುರಿತು ಕೇಂದ್ರ ಹಾಗೂ ಮುಖ್ಯಮಂತ್ರಿಗಳು ಸಮಾಲೋಚನೆ ನಡೆಸಿದ್ದಾರೆ. ಸೂಕ್ತ ಸಮಯದಲ್ಲಿ ಪುನಾರಚನೆ ಕುರಿತಂತೆ ನಿರ್ಧಾರ ಹೊರಬೀಳಲಿದೆ ಎಂದರು.

Minister Hebbar
ಸಚಿವ ಶಿವರಾಮ್ ಹೆಬ್ಬಾರ್

By

Published : Nov 21, 2020, 12:20 PM IST

ಶಿರಸಿ: ಸಂಪುಟ ಪುನಾರಚನೆ ಮುಖ್ಯಮಂತ್ರಿಗಳ ಪರಮಾಧಿಕಾರ. ಮುಖ್ಯಮಂತ್ರಿಗಳು ಸೂಕ್ತ ಸಮಯದಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದರು.

ಕೆಡಿಸಿಸಿ ಬ್ಯಾಂಕ್ ಚುನಾವಣೆ ಪ್ರಕ್ರಿಯೆಗೆ ಶಿರಸಿಗೆ ಆಗಮಿಸಿದ ಸಚಿವ ಹೆಬ್ಬಾರ್, ಮುಖ್ಯಮಂತ್ರಿಗಳು ಈಗಾಗಲೇ ದೆಹಲಿಗೆ ಹೋಗಿ ಬಂದಿದ್ದಾರೆ. ಸಂಪುಟ ಪುನಾರಚನೆ ಬಗ್ಗೆ ವರಿಷ್ಠರ ಜೊತೆ ಚರ್ಚೆ ಕೂಡ ನಡೆದಿದೆ. ಈ ಬಗ್ಗೆ ಕೇಂದ್ರ ಹಾಗೂ ಮುಖ್ಯಮಂತ್ರಿಗಳು ಸಮಾಲೋಚನೆ ನಡೆಸಿದ್ದಾರೆ. ಸೂಕ್ತ ಸಮಯದಲ್ಲಿ ಪುನಾರಚನೆ ಕುರಿತಂತೆ ನಿರ್ಧಾರ ಹೊರ ಬೀಳಲಿದೆ ಎಂದರು.

ಇದೇ ವೇಳೆ, ಶಿರಸಿ ಜಿಲ್ಲೆ ರಚನೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, ಜಿಲ್ಲೆ ರಚನೆ ಕುರಿತಂತೆ ವಿಧಾನಸಭಾಧ್ಯಕ್ಷರ ಜೊತೆಯಲ್ಲಿ ಚರ್ಚಿಸಿ ತಿರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.

ABOUT THE AUTHOR

...view details