ಕರ್ನಾಟಕ

karnataka

ETV Bharat / state

ಸಿಎಎ, ಎನ್ಆರ್‌ಸಿ ಕಾಯ್ದೆಗೆ ವಿರೋಧ.. ಮುಸ್ಲಿಂ ಯುನೈಟೆಡ್ ಫೋರಂ ಪ್ರತಿಭಟನೆ - karwar news

ಸಿಎಎ ಹಾಗೂ ಎನ್ಆರ್‌ಸಿ ಕಾಯ್ದೆ ಜಾರಿ ವಿರೋಧಿಸಿ ಕಾರವಾರದಲ್ಲಿ ನಾರ್ಥ್ ಕೆನರಾ ಮುಸ್ಲಿಂ ಯುನೈಟೆಡ್ ಫೋರಂನಿಂದ ಪ್ರತಿಭಟನೆ ನಡೆಸಲಾಯಿತು.

CAA,NRC  Opposition protest by North Canara Muslim United Forum
ಸಿಎಎ,ಎನ್ಆರ್‌ಸಿ ಕಾಯ್ದೆಗೆ ವಿರೋಧ..ನಾರ್ಥ್ ಕೆನರಾ ಮುಸ್ಲಿಂ ಯುನೈಟೆಡ್ ಫೋರಂನಿಂದ ಪ್ರತಿಭಟನೆ

By

Published : Feb 3, 2020, 1:40 PM IST

ಕಾರವಾರ: ಸಿಎಎ ಹಾಗೂ ಎನ್ಆರ್‌ಸಿ ಕಾಯ್ದೆ ಜಾರಿ ವಿರೋಧಿಸಿ ಕಾರವಾರದಲ್ಲಿ ನಾರ್ಥ್ ಕೆನರಾ ಮುಸ್ಲಿಂ ಯುನೈಟೆಡ್ ಫೋರಂ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಸಿಎಎ,ಎನ್ಆರ್‌ಸಿ ಕಾಯ್ದೆಗೆ ವಿರೋಧ..ನಾರ್ಥ್ ಕೆನರಾ ಮುಸ್ಲಿಂ ಯುನೈಟೆಡ್ ಫೋರಂನಿಂದ ಪ್ರತಿಭಟನೆ

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೋಂದಣಿ ತೆಗೆದುಹಾಕುವಂತೆ ಆಗ್ರಹಿಸಿದರು. ಅಲ್ಲದೇ, ಸಿಎಎ ಕಾಯ್ದೆಯನ್ನು ಜಾತಿ ಆಧಾರದಲ್ಲಿ ರೂಪಿಸಿದ್ದು, ಇದರಲ್ಲಿ ಮುಸ್ಲಿಂಮರನ್ನ ದೇಶದಿಂದ ಹೊರಹಾಕುವ ದುರುದ್ದೇಶವಿದೆ. ಇದು ಅಸಂವಿಧಾನಿಕ ಕಾಯ್ದೆಯಾಗಿದ್ದು, ಕೇಂದ್ರ ಸರ್ಕಾರ ಸಿಎಎ,ಎನ್ಆರ್‌ಸಿ ಕಾಯ್ದೆಗಳನ್ನು ಕೂಡಲೇ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯ ನ್ಯಾಯಾಧೀಶರಿಗೆ ಮನವಿ ಸಲ್ಲಿಸಿ,ಕಾಯ್ದೆ ಹಿಂಪಡೆಯುವಂತೆ ಮನವಿ ಸಲ್ಲಿಸಿದರು.

ABOUT THE AUTHOR

...view details