ಶಿರಸಿ(ಉತ್ತರ ಕನ್ನಡ): ಕಳೆದ ವರ್ಷ ಕೊಳೆ ರೋಗದಿಂದ ಭಾಗಶಃ ಬೆಳೆ ನಾಶವಾಗಿ ತತ್ತರಿಸಿದ್ದ ಮಲೆನಾಡಿನ ಅಡಿಕೆ ಬೆಳೆಗಾರರು, ಮುಂಜಾಗ್ರತಾ ಕ್ರಮವಾಗಿ ಔಷಧಿ ಸಿಂಪಡಣೆಗೆ ಕೊನೆಗೌಡರ ಮನೆ ಬಾಗಿಲಿಗೆ ಅಲೆದಾಡುತ್ತಿದ್ದು, ತುತ್ತಾ ಸುಣ್ಣ, ಬಯೋಪೈಟ್ ಸಿಂಪಡಣೆಗೆ ಮುಂದಾಗಿದ್ದಾರೆ.
ಜಿಲ್ಲೆಯಲ್ಲಿ ಅತೀ ಹೆಚ್ಚು ಅಡಿಕೆ ಬೆಳೆಯುವ ಭಾಗವಾದ ಶಿರಸಿ, ಸಿದ್ದಾಪುರ ಹಾಗೂ ಯಲ್ಲಾಪುರ ತಾಲೂಕಿನಲ್ಲಿ ಹಿಂದಿನ ವರ್ಷದ ಮುಸಲಧಾರೆಯ ಅಬ್ಬರಕ್ಕೆ ಅರ್ಧಕ್ಕಿಂತ ಅಧಿಕ ಅಡಿಕೆ ಬೆಳೆ ಕೊಳೆ ರೋಗಕ್ಕೆ ತುತ್ತಾಗಿ, ಸಣ್ಣ ಹಾಗೂ ಅತಿ ಸಣ್ಣ ರೈತರು ಕೊಳೆ ರೋಗದಿಂದ ಬೆಳೆ ಉಳಿಸಿಕೊಳ್ಳಲಾಗದೇ ಪರಿತಪಿಸುವಂತಾಗಿತ್ತು. ಆದರೆ ಈ ಬಾರಿ ಮೊದಲೇ ಔಷಧಿ ಸಿಂಪಡಿಸಲು ಮುಂದಾಗಿದ್ದು, ಮರವೇರಿ ಔಷಧಿ ಸಿಂಪಡಿಸುವ ಕೊನೆಗೌಡರ ಹುಡುಕಾಟದಲ್ಲಿ ಅಡಿಕೆ ಬೆಳೆಗಾರರು ತೊಡಗಿದ್ದಾರೆ.