ಕರ್ನಾಟಕ

karnataka

ETV Bharat / state

ಗ್ರಾಮ ಪಂಚಾಯತ್ ಅಖಾಡದಲ್ಲಿ ಗೆಲುವು ಸಾಧಿಸಿದ ಅಣ್ತಮ್ಮಾ.. ಯಾರೂ ಆಗಲಿಲ್ಲ 'ಸಹೋದರರಿಗೆ ಸವಾಲ್‌'! - Ghadasai gra,m Panchayat

ಕಾರವಾರದ ಘಾಡಸಾಯಿ ‌ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸಹೋದರರಿಬ್ಬರು ಗೆಲುವು ಸಾಧಿಸಿದ್ದಾರೆ. ಚುನಾವಣೆಯಲ್ಲಿ ಗೆಲುವು ಪಡೆದಿರುವುದಕ್ಕೆ ಸಹೋದರರಿಬ್ಬರು ಹರ್ಷ ವ್ಯಕ್ತಪಡಿಸಿದ್ದಾರೆ..

brother  won Ghadasai  Gram panchayat election
ಗ್ರಾಮ ಪಂಚಾಯತ್ ಅಖಾಡದಲ್ಲಿ ಗೆಲುವು ಸಾಧಿಸಿದ ಸಹೋದರರು

By

Published : Dec 30, 2020, 1:25 PM IST

ಕಾರವಾರ (ಉತ್ತರಕನ್ನಡ) :ತಾಲೂಕಿನ ಘಾಡಸಾಯಿ ‌ಗ್ರಾಮ ಪಂಚಾಯತ್​ ಚುನಾವಣೆಯಲ್ಲಿ ಸಹೋದರರಿಬ್ಬರು ವಿಜಯಮಾಲೆ ಧರಿಸಿದ್ದಾರೆ.

ಘಾಡಸಾಯಿ‌ ಪಂಚಾಯತ್‌ಗೆ ಸ್ಪರ್ಧಿಸಿದ್ದ ಬೋಳಶಿಟ್ಟಾ ವಾರ್ಡ್‌ನ ಗಿರೀಶ್ ಕೊಠಾರಕರ್ ಎಂಬುವರು 181 ಮತ ಪಡೆದು 61 ಮತಗಳ ಅಂತರದಿಂದ ಗೆಲುವು ಪಡೆದಿದ್ದಾರೆ. ಇವರು ಸತತ ಮೂರನೇ ಬಾರಿಗೆ ಗ್ರಾಪಂ ಚುನಾವಣೆಗೆ ಸ್ಪರ್ಧಿಸಿ ವಿಜಯಶಾಲಿಯಾಗಿ ಹ್ಯಾಟ್ರಿಕ್ ಮಾಡಿದ್ದಾರೆ.

ಗ್ರಾಮ ಪಂಚಾಯತ್ ಅಖಾಡದಲ್ಲಿ ಗೆಲುವು ಸಾಧಿಸಿದ ಸಹೋದರರು..

ಇನ್ನು, ಹಳಗೆಜೂಗದ ವಾರ್ಡ್‌ನಿಂದ ಸ್ಪರ್ಧಿಸಿದ್ದ ಗಿರೀಶ್ ಕೊಠಾರಕರ್ ತಮ್ಮ ಅವಿನಾಶ್​ ಕೊಠಾರಕರ್‌ ಕೂಡ 221 ಮತಗಳನ್ನು ಪಡೆದು 19 ಮತಗಳ ಅಂತರದಿಂದ ಮೊದಲ ಬಾರಿಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಚುನಾವಣೆಯಲ್ಲಿ ಗೆಲುವು ಪಡೆದಿರುವುದಕ್ಕೆ ಸಹೋದರರಿಬ್ಬರು ಹರ್ಷ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details