ಉತ್ತರಕನ್ನಡ:ಪಂಚಮಸಾಲಿ ಲಿಂಗಾಯತರನ್ನು 2ಎ ಮೀಸಲಾತಿಗೆ ಸೇರಿಸುವುದಕ್ಕೆ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ವಿರೋಧ ವ್ಯಕ್ತಪಡಿಸಿದ್ದಾರೆ.
ಪಂಚಮಸಾಲಿ 2ಎ ಸೇರ್ಪಡೆಗೆ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ವಿರೋಧ - ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಲೇಟೆಸ್ಟ್ ನ್ಯೂಸ್
ಪಂಚಮಸಾಲಿ ಲಿಂಗಾಯತರನ್ನು 2ಎ ಗೆ ಸೇರಿಸುವುದಕ್ಕೆ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ವಿರೋಧ ವ್ಯಕ್ತಪಡಿಸಿದ್ದಾರೆ.
Brahmananda Saraswathi Swamiji
ಜಿಲ್ಲೆಯ ಭಟ್ಕಳದಲ್ಲಿ ಹಿಂದುಳಿದ ವರ್ಗಗಳ ಹಿತರಕ್ಷಣಾ ವೇದಿಕೆಯಿಂದ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲಿಂಗಾಯತರನ್ನು 2ಎ ಗೆ ಸೇರಿಸುವುದನ್ನು ವಿರೋಧಿಸಿದ್ದಾರೆ. ನಮ್ಮ ಈ ನಿಲುವಿಗೆ 20ಕ್ಕೂ ಅಧಿಕ ಸಮುದಾಯಗಳ ಮುಖಂಡರು ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದರು.
ಉನ್ನತ ಸ್ಥಾನಮಾನ ಗಳಿಸಿದ ಸಮುದಾಯ ಪಂಚಮಸಾಲಿ ಬಹುಸಂಖ್ಯಾತ ಆನೆ ಕೆಳಗೆ ಬಿದ್ದರೆ ಸಣ್ಣ ಸಮುದಾಯಗಳು ಅಪ್ಪಚ್ಚಿಯಾಗುತ್ತವೆ. ಸರ್ಕಾರ ಇದನ್ನು ತೀವ್ರವಾಗಿ ಗಮನಿಸಬೇಕು. ಮೀಸಲಾತಿಯನ್ನು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಒತ್ತಾಯಿಸಿದ್ದಾರೆ.