ಕರ್ನಾಟಕ

karnataka

ETV Bharat / state

ಶ್ರೀಮುರ್ಡೇಶ್ವರ ಶಿಲ್ಪಕಲಾ ಸಂಘದಿಂದ ನೆರೆ ಸಂತ್ರಸ್ತ ವಿದ್ಯಾರ್ಥಿಗಳಿಗೆ ಪುಸ್ತಕ, ಬ್ಯಾಗ್​ ವಿತರಣೆ.. - uttara kannada flood news

ಉತ್ತರಕನ್ನಡ ಜಿಲ್ಲೆ ಭಟ್ಕಳ ತಾಲೂಕಿನ ಶ್ರೀಮುರ್ಡೇಶ್ವರ ಶಿಲ್ಪಕಲಾ ಸಂಘದ ವತಿಯಿಂದ ಭಟ್ಕಳ ತಾಲೂಕಿನ ನಾನಾ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ವಿತರಿಸಿದರು.

ಟ್ಕಳ ತಾಲೂಕಿನ ಶ್ರೀಮುರ್ಡೇಶ್ವರ ಶಿಲ್ಪ ಕಲಾಸಂಘ

By

Published : Sep 27, 2019, 9:56 AM IST

ಭಟ್ಕಳ: ತಾಲೂಕಿನ ಶ್ರೀಮುರ್ಡೇಶ್ವರ ಶಿಲ್ಪಕಲಾ ಸಂಘ ನೆರೆ ಹಾವಳಿಗೆ ತುತ್ತಾದ ವಿದ್ಯಾರ್ಥಿಗಳಿಗೆ ಬೋಧಕೇತರ ವಸ್ತುಗಳನ್ನು ವಿತರಿಸಿದೆ. ನೆರೆ ಪೀಡಿತ ಪ್ರದೇಶಗಳಾದ ಹೊನ್ನಾವರ, ಕುಮಟಾ, ಅಂಕೋಲಾ ಸೇರಿದಂತೆ ತಾಲೂಕಿನ ಶಾಲೆಗಳಿಗೆ ಭೇಟಿ ನೀಡಿ, ಶಾಲಾ ಕೈಚೀಲ, ಪುಸ್ತಕ, ಪೆನ್ನು ಸೇರಿದಂತೆ ಅಗತ್ಯ ವಸ್ತುಗಳನ್ನು ಮಕ್ಕಳಿಗೆ ಒದಗಿಸಿದರು.

ಭಟ್ಕಳ ತಾಲೂಕಿನ ಶ್ರೀಮುರ್ಡೇಶ್ವರ ಶಿಲ್ಪ ಕಲಾಸಂಘದ ಮಾನವೀಯತೆ..

ಹೊನ್ನಾವರ ತಾಲೂಕಿನ ಶಾಲೆಗಳಾದ ಗುಂಡಿಬೈಲ್​, ಹಡಿನಬಾಳ ಹಾಗೂ ಕುಮಟಾ, ಬೋಳುಕುಂಟೆ, ಅಗ್ರಗೋಣ, ದಿವಗಿ ಸೇರಿದಂತೆ ಸುಮಾರು 400ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಇದರಿಂದ ಸಹಾಯವಾಗಿದೆ.ನೆರೆ ಸಂತ್ರಸ್ತ ಗ್ರಾಮದ ಬಹುತೇಕ ಮನೆಗಳು ಪ್ರವಾಹದ ನೀರಿನಲ್ಲಿ ಮುಳುಗಿದ್ದರ ಪರಿಣಾಮ ವಿದ್ಯಾರ್ಥಿಗಳ ಎಲ್ಲ ವಸ್ತುಗಳು ನೀರು ಪಾಲಾಗಿದ್ದವು. ಇದನ್ನು ತಾಲೂಕಿನ ಶ್ರೀಮುರ್ಡೇಶ್ವರ ಶಿಲ್ಪಕಲಾ ಸಂಘದ ಸದಸ್ಯರೆಲ್ಲರು ಸೇರಿ ಅಂತಹ 382 ವಿದ್ಯಾರ್ಥಿಗಳನ್ನು ಗುರುತಿಸಿ ಹಾಗೂ ಇನ್ನುಳಿದ ಕೆಲವು ಬಡ ವಿದ್ಯಾರ್ಥಿಗಳಿಗೂ ಶಾಲಾ ಬ್ಯಾಗ್ ವಿತರಿಸಿದರು.

ಈ ಸಂದರ್ಭದಲ್ಲಿ ಅಣ್ಣಪ್ಪ ನಾಯ್ಕ, ಮಾಸ್ತಪ್ಪ ನಾಯ್ಕ, ಜಯಂತ ನಾಯ್ಕ ಮೂಡಲಮನೆ, ನಾಗೇಂದ್ರ ದೇವಡಿಗ, ವಿಷ್ಣು ನಾಯ್ಕ ಹೆರಾಡಿ, ಸಂತೋಷ ನಾಯ್ಕ ಅಂಕೋಲಾ, ಸಿ ಆರ್‌ ಪಿ ಶ್ರೀನಿವಾಸ್ ನಾಯ್ಕ್, ನಿತ್ಯಾನಂದ ಬಲ್ಸೆ, ಹರಿಶ್ಚಂದ್ರ ಪಟಗಾರ ಈ ವೇಳೆ ಉಪಸ್ಥಿತರಿದ್ದರು.

ABOUT THE AUTHOR

...view details