ಕಾರವಾರ: ಅಲೆ ಅಬ್ಬರಕ್ಕೆ ಬೋಟ್ ತಳಭಾಗ ಹಾನಿಯಾಗಿ ಮುಳುಗುತ್ತಿದ್ದ ಬೋಟ್‌ನಿಂದ 12 ಮೀನುಗಾರರನ್ನು ರಕ್ಷಣೆ ಮಾಡಿರುವ ಘಟನೆ ಅಂಕೋಲಾ ತಾಲೂಕಿನ ಬೆಳಾಂಬರ ಬಳಿ ಸಮುದ್ರದಲ್ಲಿ ಮಂಗಳವಾರ ನಡೆದಿದೆ. ತಾಲ್ಲೂಕಿನ ಚಂದ್ರಾವತಿ ಸುಭಾಸ್ ಖಾರ್ವಿ ಎಂಬುವವರಿಗೆ ಸೇರಿದ ಪರ್ಸಿಯನ್ ಬೋಟ್, ಸೋಮವಾರ ಆಳಸಮುದ್ರ ಮೀನುಗಾರಿಕೆಗೆ ತೆರಳಿತ್ತು. ಆದರೆ ಬೋಟ್ ಮೀನುಗಾರಿಕೆಗೆ ತೆರಳಿದ ಬಳಿಕ ಗಾಳಿ ಮಳೆ ಆರ್ಭಟ ಜೋರಾಗಿ ಅಲೆಗಳ ಅಬ್ಬರ ಹೆಚ್ಚಾಗಿತ್ತು.
ಕಾರವಾರದ ಆಳಸಮುದ್ರದಲ್ಲಿ ಮುಳುಗುತ್ತಿದ್ದ ಬೋಟ್: ಇನ್ನೊಂದು ಬೋಟ್ ಸಹಾಯದಿಂದ 12 ಮೀನುಗಾರರ ರಕ್ಷಣೆ
ಮುಳುಗುತ್ತಿದ್ದ ಬೋಟ್‌ನಲ್ಲಿದ್ದ ಮೀನುಗಾರರು ಸಮೀಪದಲ್ಲಿದ್ದ ಬೋಟ್‌ಗೆ ಮಾಹಿತಿ ರವಾನಿಸಿದ್ದು, ರಕ್ಷಣೆಗೆ ಧಾವಿಸಿದ್ದಾರೆ.
ಅಲ್ಲದೆ ಅಲೆಗಳ ಹೊಡೆತಕ್ಕೆ ಬೋಟ್‌ನ ತಳಭಾಗದ ಫೈಬರ್‌ಗೆ ಹಾನಿಯಾಗಿ ಬೋಟ್‌ನೊಳಗೆ ನೀರು ನುಗ್ಗಲಾರಂಭಿಸಿತ್ತು. ತಕ್ಷಣ ಮುಳುಗಡೆಯಾಗುತ್ತಿದ್ದ ಜೈ ಶ್ರೀರಾಮ್ ಬೋಟ್‌ನಲ್ಲಿದ್ದ ಮೀನುಗಾರರು ಸಮೀಪದಲ್ಲಿದ್ದ ಬೋಟ್‌ಗೆ ರಕ್ಷಿಸುವಂತೆ ಮಾಹಿತಿ ರವಾನಿಸಿದ್ದು, ಆ ಬೋಟ್‌ನಲ್ಲಿದ್ದ ಮೀನುಗಾರರು ಆಗಮಿಸಿ ಅಪಾಯದಲ್ಲಿದ್ದ 12 ಮಂದಿಯನ್ನು ರಕ್ಷಣೆ ಮಾಡಿದ್ದಾರೆ. ಆದರೆ ಬೋಟ್‌ನಲ್ಲಿ ನೀರು ತುಂಬಿಕೊಂಡ ಕಾರಣ ಮೀನು ಬಲೆ, ಎಂಜಿನ್ ಸೇರಿದಂತೆ ಒಂದು ಕೋಟಿ ರೂಪಾಯಿಗೂ ಹೆಚ್ಚು ಹಾನಿಯಾಗಿದ್ದು, ಬಳಿಕ ಬೋಟ್‌ನ್ನು ಇನ್ನೊಂದು ಬೋಟ್ ಸಹಾಯದಿಂದ ಎಳೆದು ತರಲಾಗಿದೆ ಎಂದು ಮೀನುಗಾರರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:Video ನೋಡಿ... ಮುಳುಗುತ್ತಿದ್ದ ಬೋಟ್‌ನಿಂದ ನಾಲ್ವರು ಮೀನುಗಾರರ ರಕ್ಷಣೆ