ಭಟ್ಕಳ (ಉತ್ತರಕನ್ನಡ): ಭಟ್ಕಳ ತಾಲೂಕಿನ ಆಳ್ವೇಕೋಡಿಯಿಂದ ಮೀನುಗಾರಿಕೆಗೆ ತೆರಳಿದ್ದ ಪಾತಿ ದೋಣಿಯೊಂದು ಕಾಗೆಗುಡ್ಡ ಸಮೀಪದಲ್ಲಿ ಗಾಳಿಯ ಹೊಡೆತಕ್ಕೆ ಸಿಲುಕಿ ಮುಳುಗುತ್ತಿದ್ದಾಗ ಕರಾವಳಿ ಕಾವಲು ಪಡೆಯ ಪೊಲೀಸರು ರಕ್ಷಣೆ ಮಾಡಿದ್ದಾರೆ.
ಆಳ್ವೇಕೋಡಿ ಸಮುದ್ರ ತೀರದಿಂದ ಮೀನುಗಾರಿಕೆ ತೆರಳಿದ್ದ ಶಿರಾಲಿ ಮೊಗೇರಕೇರಿ ನಿವಾಸಿ ಮಂಜುನಾಥ ಬೈರಾ ಮೊಗೇರ ಎನ್ನುವವರ ಪಾತಿ ದೋಣಿ ಕಾಗೆಗುಡ್ಡ ಸಮೀಪ ಗಾಳಿಯ ಹೊಡೆತಕ್ಕೆ ಸಿಲುಕಿ ಮುಳುಗುತ್ತಿತ್ತು.