ಕಾರವಾರ: ತಾಂತ್ರಿಕ ದೋಷದಿಂದ ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಡೆಯಾಗಿ 15ಕ್ಕೂ ಹೆಚ್ಚು ಮೀನುಗಾರರನ್ನು ರಕ್ಷಣೆ ಮಾಡಿರುವ ಘಟನೆ ಹೊನ್ನಾವರದ ಅಳಿವೆ ಬಳಿ ಅರಬ್ಬಿ ಸಮುದ್ರದಲ್ಲಿ ನಡೆದಿದೆ.
ಹೊನ್ನಾವರ ಬಳಿ ಸಮುದ್ರದಲ್ಲಿ ಬೋಟ್ ಮುಳುಗಡೆ: 15 ಮಂದಿ ಮೀನುಗಾರರ ರಕ್ಷಣೆ - Boat drowning in Honnavar
ತಾಂತ್ರಿಕ ದೋಷದಿಂದ ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಡೆಯಾಗಿದ್ದು, 15ಕ್ಕೂ ಹೆಚ್ಚು ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹೊನ್ನಾವರದಲ್ಲಿ ಬೋಟ್ ಮುಳುಗಡೆ: 15 ಮಂದಿ ಮೀನುಗಾರರ ರಕ್ಷಣೆ
ಫೆಲಿಕ್ಸ್ ಲೂಫಿಸ್ಸೇಂಟ್ ಎಂಬುವವರ ಮಾಲೀಕತ್ವದ ಸೆಂಟ್ ಅಂತೋನಿ ಎಂಬ ಬೋಟ್ ಮೀನುಗಾರಿಕೆಗೆ ತೆರಳಿದ್ದಾಗ ಬೋಟ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಅಲೆಗಳ ರಭಸಕ್ಕೆ ಮುಳುಗಡೆಯಾಗಿದೆ ಎನ್ನಲಾಗಿದೆ. ತಕ್ಷಣ ಬೋಟ್ನಲ್ಲಿದ್ದ ಸುಮಾರು 15 ಮೀನುಗಾರರನ್ನು ಇತರೆ ಬೋಟ್ಗಳ ಮೀನುಗಾರರು ರಕ್ಷಣೆ ಮಾಡಿದ್ದಾರೆ.
ಬೋಟ್ನಲ್ಲಿ ಬಲೆ ಸೇರಿದಂತೆ ಇನ್ನಿತರ ಪರಿಕರಗಳು ಸಮುದ್ರಪಾಲಾಗಿದ್ದು, ಲಕ್ಷಾಂತರ ರೂಪಾಯಿ ಹಾನಿಯಾಗಿದೆ.
Last Updated : Sep 10, 2020, 10:13 AM IST