ಕರ್ನಾಟಕ

karnataka

ETV Bharat / state

ಆಳ ಸಮುದ್ರದಲ್ಲಿ ಮುಳುಗಿದ ಬೋಟ್: 15 ಮೀನುಗಾರರ ರಕ್ಷಣೆ - ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ ಬೋಟ್ ಮುಳುಗಡೆ

ಎರಡು ದಿನದ ಹಿಂದೆ ಹದಿನೈದು ಮೀನುಗಾರರೊಂದಿಗೆ ಮೀನುಗಾರಿಕೆಗೆ ತೆರಳಿದ ವೇಳೆ ಆಳ ಸಮುದ್ರದಲ್ಲಿ ವಿಪರೀತ ಗಾಳಿ ಹೆಚ್ಚಾಗಿದ್ದರಿಂದ ಬೋಟ್ ಮುಳುಗಡೆಯಾಗಿದೆ ಎನ್ನಲಾಗಿದೆ.

ಆಳ ಸಮುದ್ರದಲ್ಲಿ ಮುಳುಗಿದ ಬೋಟ್
ಆಳ ಸಮುದ್ರದಲ್ಲಿ ಮುಳುಗಿದ ಬೋಟ್

By

Published : Feb 19, 2021, 5:11 PM IST

Updated : Feb 19, 2021, 5:17 PM IST

ಕಾರವಾರ: ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ ಬೋಟ್ ಮುಳುಗಿದ್ದು, 15 ಮಂದಿ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.

ಆಳ ಸಮುದ್ರದಲ್ಲಿ ಮುಳುಗಿದ ಬೋಟ್

ಹೊನ್ನಾವರದಿಂದ 40 ನಾಟಿಕಲ್ ಮೈಲು ದೂರದ ಆಳ ಸಮುದ್ರದಲ್ಲಿ ಘಟನೆ ನಡೆದಿದೆ. ಕುಮಟಾ ತಾಲೂಕಿನ ಮಿರ್ಜಾನ್ ಗ್ರಾಮದ ದುರ್ಗಾ ಭೈರವಿ ಬೋಟ್ ಮುಳುಗಡೆಯಾಗಿದೆ.

15 ಮೀನುಗಾರರ ರಕ್ಷಣೆ

ಎರಡು ದಿನದ ಹಿಂದೆ ಹದಿನೈದು ಮೀನುಗಾರರೊಂದಿಗೆ ಮೀನುಗಾರಿಕೆಗೆ ತೆರಳಿದ ವೇಳೆ ಆಳ ಸಮುದ್ರದಲ್ಲಿ ವಿಪರೀತ ಗಾಳಿ ಹೆಚ್ಚಾಗಿದ್ದರಿಂದ ಬೋಟ್ ಮುಳುಗಡೆಯಾಗಿದೆ ಎನ್ನಲಾಗಿದೆ.

ಇದನ್ನೂ ಓದಿ:ಗ್ರಾ.ಪಂ. ಚುನಾವಣಾ ರಾಜಕೀಯ.. 'ಕೈ' ಮುಖಂಡರ ಕಿತ್ತಾಟ

ಅಲ್ಲೆ ಸಮೀಪದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಇನ್ನೊಂದು ಮೀನುಗಾರಿಕಾ ಬೋಟ್ ಮುಳುಗುತ್ತಿದ್ದ ಬೋಟ್​ನಲ್ಲಿದ್ದ ಮೀನುಗಾರರನ್ನು ರಕ್ಷಿಸಿದ್ದಾರೆ.

Last Updated : Feb 19, 2021, 5:17 PM IST

ABOUT THE AUTHOR

...view details