ಕಾರವಾರ:ಮರಳುಗಾರಿಕೆ ನಡೆಸುವಾಗ ದೋಣಿಯೊಂದು ಮಗುಚಿದ್ದು, ಅದೃಷ್ಟವಶಾತ್ 7 ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಕುಮಟಾ ತಾಲೂಕಿನ ಮಾನೀರ ಸಮೀಪ ಅಘನಾಶಿನಿ ನದಿಯಲ್ಲಿ ಇಂದು ನಡೆದಿದೆ.
ಮರಳುಗಾರಿಕೆ ನಡೆಸುತ್ತಿದ್ದ ದೋಣಿ ಮುಳುಗಡೆ: 7 ಕಾರ್ಮಿಕರು ಪ್ರಾಣಾಪಾಯದಿಂದ ಪಾರು - ಕಾರವಾರ ಸುದ್ದಿ
ಅಘನಾಶಿನಿ ನದಿಯಲ್ಲಿ ಮರಳುಗಾರಿಕೆ ನಡೆಸುವಾಗ ದೋಣಿಯೊಂದು ಮಗುಚಿದ್ದು, ಅದೃಷ್ಟವಶಾತ್ 7 ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಘನಾಶಿನಿಯಲ್ಲಿ ಮುಳುಗಡೆಯಾದ ದೋಣಿ
ಕುಮಟಾ ತಾಲೂಕಿನ ದೀವಗಿಯ ನಿತ್ಯ ಅಂಬಿಗ ಎಂಬವರಿಗೆ ಸೇರಿದ ದೋಣಿ ಮೂಲಕ ಅಘನಾಶಿನಿ ನದಿಯಲ್ಲಿ ಇಂದು ಬೆಳಗ್ಗೆ ಮರಳು ತೆಗೆಯಲಾಗುತ್ತಿತ್ತು. ಆದರೆ ಅತಿಯಾದ ಭಾರದಿಂದಾಗಿ ದೋಣಿ ಒಂದು ಕಡೆ ವಾಲಿ ಮುಳುಗಡೆಯಾಗಿದೆ.
ಅಘನಾಶಿನಿಯಲ್ಲಿ ಮುಳುಗಡೆಯಾದ ದೋಣಿ
ಈ ವೇಳೆ ಕೆಲಸ ಮಾಡುತ್ತಿದ್ದ 7 ಮಂದಿ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದೀಗ ಇತರೆ ಬೋಟ್ಗಳ ಸಹಾಯದೊಂದಿಗೆ ಮುಳುಗಿದ ದೋಣಿ ಮೇಲೆತ್ತಲು ಪ್ರಯತ್ನಿಸಲಾಗುತ್ತಿದೆ.