ಭಟ್ಕಳ: ಮುರುಡೇಶ್ವರದ ಅರಬ್ಬಿ ಸಮುದ್ರಲ್ಲಿ ಮೀನುಗಾರಿಕೆಗೆ ತೆರಳಿ ವಾಪಸ್ಸಾಗುವ ವೇಳೆ ಗಿಲ್ನಟ್ ದೋಣಿ ಸಮುದ್ರ ಅಲೆಯ ರಭಸಕ್ಕೆ ಮಗುಚಿದೆ. ಘಟನೆಯಲ್ಲಿ ಸಿಲುಕಿದ್ದ ಎಲ್ಲಾ ಏಳು ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ.
ಭಟ್ಕಳ: ಅಲೆಯ ಅಬ್ಬರಕ್ಕೆ ಮೀನುಗಾರಿಕಾ ದೋಣಿ ಪಲ್ಟಿ - Murudeshwara News
ಅರಬ್ಬಿ ಸಮುದ್ರಲ್ಲಿ ಮೀನುಗಾರಿಕೆಗೆ ತೆರಳಿದ್ದ ದೋಣಿ ಪಲ್ಟಿಯಾಗಿದ್ದು ಅವಘಡ ತಪ್ಪಿದೆ.
![ಭಟ್ಕಳ: ಅಲೆಯ ಅಬ್ಬರಕ್ಕೆ ಮೀನುಗಾರಿಕಾ ದೋಣಿ ಪಲ್ಟಿ arabian-sea](https://etvbharatimages.akamaized.net/etvbharat/prod-images/768-512-12676919-thumbnail-3x2-mng.jpg)
ಅಲೆಯ ಅಬ್ಬರಕ್ಕೆ ಸಿಲುಕಿದ ದೋಣಿ
ಜನಾರ್ದನ ಪುರಸು ಹರಿಕಾಂತ ಗದ್ದೆಮನೆ ಎಂಬವರಿಗೆ ಸೇರಿದ ಜಲಗಂಗಾ ದೋಣಿ ಮೀನುಗಾರಿಕೆ ತೆರಳಿತ್ತು. ಅಲ್ಲಿಂದ ಮರಳಿ ಬರುವ ವೇಳೆ ಅಲೆಯ ರಭಸಕ್ಕೆ ದೋಣಿ ಮಗುಚಿದೆ. ತಕ್ಷಣವೇ ದೋಣಿಯಲ್ಲಿದ್ದ ಮೀನುಗಾರರು ಸಮುದ್ರಕ್ಕೆ ಹಾರಿ, ಮಗುಚಿದ ದೋಣಿಯ ಮೇಲೆ ಕುಳಿತುಕೊಂಡು ಸಹಾಯಕ್ಕಾಗಿ ಅಂಗಲಾಚಿದರು. ತಕ್ಷಣವೇ ಕಾರ್ಯಪ್ರವೃತ್ತರಾದ ದಡದಲ್ಲಿದ್ದ ಇತರೆ ಮೀನುಗಾರರು, ಬೇರೊಂದು ಬೋಟ್ ಮೂಲಕ ತೆರಳಿ ಸಂಕಷ್ಟದಲ್ಲಿದ್ದ ಮೀನುಗಾರರ ಪ್ರಾಣ ರಕ್ಷಣೆ ಮಾಡಿದ್ದಾರೆ.
ಅಲೆಯ ಅಬ್ಬರಕ್ಕೆ ಸಿಲುಕಿದ ದೋಣಿ
ದೋಣಿಯ ಎಂಜಿನ್ ಹಾಗೂ ಮೀನುಗಾರಿಕೆಗೆ ಬಳಸುವ ಬಲೆ ಸೇರಿ ಸುಮಾರು 1,50,000 ರೂ. ಹಾನಿಯಾಗಿರುವ ಬಗ್ಗೆ ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.