ಕರ್ನಾಟಕ

karnataka

ETV Bharat / state

ಭಟ್ಕಳ: ಮಹಿಳೆಯರಿಂದ ಯಶಸ್ವಿ ರಕ್ತದಾನ ಶಿಬಿರ - ಮಹಿಳೆಯರಿಂದ ಯಶಸ್ವಿ ರಕ್ತದಾನ ಶಿಬಿರ

ಹೆಬಳೆ ಪಂಚಾಯಿತಿ ವ್ಯಾಪ್ತಿಯ ವುಮೆನ್ಸ್ ಸೆಂಟರ್​​ನಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಿತು. ಮಹಿಳೆಯರಿಗಾಗಿಯೇ ನಡೆದ ಈ ರಕ್ತದಾನ ಶಿಬಿರದಲ್ಲಿ ಒಟ್ಟು 75 ಮಂದಿ ಮಹಿಳೆಯರು ರಕ್ತದಾನ ಮಾಡಿದ್ದಾರೆ.

blood donation camp
ಭಟ್ಕಳ: ಮಹಿಳೆಯರಿಂದ ಯಶಸ್ವಿ ರಕ್ತದಾನ ಶಿಬಿರ

By

Published : Jan 3, 2021, 5:24 PM IST

ಭಟ್ಕಳ: ಉಡುಪಿಯ ಬ್ಲಡ್ ಬ್ಯಾಂಕ್, ಜಮಾತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗ, ಜಿಐಒ, ವುಮೆನ್ಸ್ ಕ್ಲಬ್ ಮತ್ತು ಆಶಾ ಕಾರ್ಯಕರ್ತರ ಸಹಯೋಗದೊಂದಿಗೆ ಹೆಬಳೆ ಪಂಚಾಯತ್ ವ್ಯಾಪ್ತಿಯ ವುಮೆನ್ಸ್ ಸೆಂಟರ್​​ನಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಿತು.

ವೈದ್ಯಾಧಿಕಾರಿ ಡಾ.ಸವಿತಾ ಕಾಮತ್

ಮಹಿಳೆಯರಿಗಾಗಿಯೇ ನಡೆದ ಈ ರಕ್ತದಾನ ಶಿಬಿರದಲ್ಲಿ ಮಹಿಳೆಯರು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದು ಒಟ್ಟು 75 ಮಂದಿ ಮಹಿಳೆಯರು ರಕ್ತದಾನ ಮಾಡಿದ್ದಾರೆ. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿ.ಪಂ ಅಧ್ಯಕ್ಷೆ ಜಯಶ್ರೀ ಮೊಗೇರ್, ಮಹಿಳೆಯರಿಂದಲೇ ಆಯೋಜಿಸಲ್ಪಟ್ಟಿರುವ ಇಂದಿನ ರಕ್ತದಾನ ಶಿಬಿರ ಒಂದು ವಿಶೇಷ ಕಾರ್ಯಕ್ರಮವಾಗಿದೆ. ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಮುಂದುವರೆದಂತೆ ರಕ್ತದಾನ ಮಾಡುವುದರಲ್ಲಿಯೂ ಮುಂದಾಗಿರುವುದು ಸಂತಸ ತಂದಿದೆ ಎಂದರು.

ಓದಿ: ಅಕ್ರಮ ಚಿನ್ನ ಸಾಗಾಟ ಆರೋಪ: ಭಟ್ಕಳದ ವ್ಯಕ್ತಿ ಪುಣೆ ಕಸ್ಟಮ್ಸ್ ಅಧಿಕಾರಿಗಳ ವಶಕ್ಕೆ

ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸವಿತಾ ಮಾತನಾಡಿ, ಭಟ್ಕಳದ ಕುರಿತಂತೆ ಯಾವಾಗಲೂ ನಕರಾತ್ಮಕವಾಗಿ ಯೋಚಿಸುವಂತವರಿಗೆ ಇಲ್ಲಿನ ಜನರ ಸಾಮಾಜಿಕ ಮತ್ತು ಮಾನವೀಯ ಕಳಕಳಿ ಅರ್ಥವಾಗದು. ಇಲ್ಲಿನ ಮಹಿಳೆಯರೂ ಕೂಡ ಸಮಾಜ ಸೇವೆಯಲ್ಲಿ ಮುಂದಿದ್ದಾರೆ ಎನ್ನುವುದಕ್ಕೆ ಇಂದಿನ ಈ ಮಹಿಳಾ ರಕ್ತದಾನ ಶಿಬಿರ ಯಶಸ್ವಿಯಾಗಿರುವುದೇ ಸಾಕ್ಷಿಯಾಗಿದೆ ಎಂದರು.

ABOUT THE AUTHOR

...view details