ಭಟ್ಕಳ: ಭಟ್ಕಳ ವೆಲ್ಫೇರ್ ಆಸ್ಪತ್ರೆ, ಭಟ್ಕಳ ಸರ್ಕಾರಿ ಆಸ್ಪತ್ರೆ ಹಾಗೂ ಉಡುಪಿ ಸರ್ಕಾರಿ ಆಸ್ಪತ್ರೆಗಳ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ಭಟ್ಕಳ ವೆಲ್ಫೇರ್ ಆಸ್ಪತ್ರೆಯ ಆವರಣದಲ್ಲಿ ರಕ್ತದಾನ ಶಿಬಿರ ನಡೆಯಿತು.
ಭಟ್ಕಳದಲ್ಲಿ ರಕ್ತದಾನ: ವೈದ್ಯರಿಂದ ಜಾಗೃತಿ
ಭಟ್ಕಳ ವೆಲ್ಫೇರ್ ಆಸ್ಪತ್ರೆಯ ಆವರಣದಲ್ಲಿ ರಕ್ತದಾನಿ ಶಿಬಿರವನ್ನು ಆಯೋಜಿಸಲಾಗಿತ್ತು. ಈ ವೇಳೆ ವೈದ್ಯರು ರಕ್ತದಾನದ ಮಹತ್ವ ಕುರಿತು ಅರಿವು ಮೂಡಿಸಿದರು.
ರಕ್ತದಾನದಿಂದ ಮೂರಕ್ಕೂ ಹೆಚ್ಚು ಜೀವಗಳನ್ನು ಉಳಿಸಬಹುದು
ಶಿಬಿರದ ಉದ್ಘಾಟಿಸಿ ಮಾತನಾಡಿ ಭಟ್ಕಳ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್ ಅವರು, ರಕ್ತದಾನವು ಓರ್ವ ವ್ಯಕ್ತಿಯನ್ನು ಆರೋಗ್ಯವಾಗಿರಿಸುತ್ತದೆ. ಹಾಗೂ ಒಂದು ಘಟಕದ ರಕ್ತವು ಮೂರಕ್ಕೂ ಹೆಚ್ಚು ಜೀವಗಳನ್ನು ಉಳಿಸುತ್ತದೆ. ನಾವು ಹೀಗೆ ಜೀವಗಳನ್ನು ಉಳಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಭಟ್ಕಳ ಸಹಾಯಕ ಆಯುಕ್ತ ಸಾಜಿದ್ ಅಹ್ಮದ್ ಮುಲ್ಲಾ, ಬ್ಲಡ್ ಬ್ಯಾಂಕ್ ಉಡುಪಿ ಆಡಳಿತ ಅಧಿಕಾರಿ ಡಾ ವೀಣಾ, ವೆಲ್ಫೇರ್ ಆಸ್ಪತ್ರೆ ವೈದ್ಯ ಡಾ. ಮೊಹಮ್ಮದ್ ರಫೀಕ್ ಸೇರಿದಂತೆ ಮುಂತಾದವರು ಹಾಜರಿದ್ದರು.