ಕಾರವಾರ: ಊರಿನ ರಸ್ತೆಗೆ ಹಣ ಮಂಜೂರು ಮಾಡದೇ ಇರುವುದಕ್ಕೆ ಶಾಸಕ ಸುನೀಲ್ ನಾಯ್ಕ ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ಪಕ್ಷದ ಕಾರ್ಯಕರ್ತರೇ ಕಪ್ಪು ಬಾವುಟ ಪ್ರದರ್ಶನ ಮಾಡಿದ ಘಟನೆ ಹೊನ್ನಾವರದ ಕೋಟೆಬೈಲ್ನಲ್ಲಿ ನಡೆದಿದೆ.
ತಮ್ಮ ಗ್ರಾಮದ ರಸ್ತೆ ಕೆಲಸ ಆಗಿಲ್ಲ, ಹಣ ಮಂಜೂರು ಮಾಡಿಲ್ಲ ಎಂದು ಶಾಸಕರು ಕಾಯಕ್ರಮದಲ್ಲಿ ಇರುವಾಗ ಪಕ್ಕದ ಮುಟ್ಟಾ ಗ್ರಾಮದ ಐದಾರು ಜನರು ಕಪ್ಪು ಬಾವುಟ ಹಿಡಿದು ಸಭಾಂಗಣದ ಸನಿಹದಲ್ಲೆ ನಿಂತಿದ್ದರು. ಬಾವುಟ ಎತ್ತಿ ಶಾಸಕರಿಗೆ ತೋರಿಸುತ್ತಲೇ ಇದ್ದರು.
ಸುಮಾರು ಹತ್ತು ನಿಮಿಷವಾದರೂ ಬಾವುಟ ಹಿಡಿದೇ ನಿಂತಿದ್ದನ್ನು ನೋಡಿ ಸೇರಿರುವ ಶಾಸಕರ ಬೆಂಬಲಿಗರು ಮತ್ತು ಕಾರ್ಯಕರ್ತರು ಸ್ಥಳಕ್ಕೆ ಜಮಾಯಿಸಿ ಮಾತಿಗೆ ಮಾತು ಬೆಳೆದು ಕೈ ಕೈ ಮೀಸಲಾಯಿಸಿದ ಘಟನೆ ನಡೆಯಿತು. ನಂತರ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಬಂದು ಪ್ರತಿಭಟನಾನಿರತರನ್ನು ದೂರ ಕಳುಹಿಸಿ ಪರಿಸ್ಥಿತಿ ತಿಳಿಗೊಳಿಸಿದರು.