ಕರ್ನಾಟಕ

karnataka

ETV Bharat / state

ತಾಯಿಯಿಂದ ಬೇರ್ಪಟ್ಟ ಕರಿ ಚಿರತೆ ಮರಿ : ಕರುಳಬಳ್ಳಿಗಾಗಿ ಹುಡುಕಾಡಿದ ತಾಯಿ - Yellapur forest range

ಕಪ್ಪು ಚಿರತೆ ಮರಿಯೊಂದು ಗಸ್ತು ತಿರುಗುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿಗೆ ಪ್ರತ್ಯಕ್ಷವಾಗಿದೆ. ತಾಯಿಯಿಂದ ಬೇರ್ಪಟ್ಟಿದ್ದ ಮರಿ ತಾಯಿಗಾಗಿ ಹುಡುಕಾಟ ನಡೆಸಿದ ದೃಶ್ಯ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ..

black cheetah cub found in Karwar fores
ತಾಯಿಯಿಂದ ಬೇರ್ಪಟ್ಟ ಕರಿ ಚಿರತೆ ಮರಿ

By

Published : Apr 16, 2022, 6:03 PM IST

ಕಾರವಾರ :ಕಪ್ಪು ಚಿರತೆಯ ಮರಿ ತಾಯಿಯಿಂದ ಬೇರ್ಪಟ್ಟ ಮತ್ತು ತಾಯಿ ಚಿರತೆ ಮಗುವಿಗಾಗಿ ಹುಡುಕಾಡಿದ ದೃಶ್ಯ ಯಲ್ಲಾಪುರದ ಅರಣ್ಯ ವ್ಯಾಪ್ತಿಯಲ್ಲಿ ಸೆರೆಯಾಗಿದೆ. ಅರಣ್ಯ ಸಿಬ್ಬಂದಿ ಗಸ್ತು ತಿರುಗುತ್ತಿದ್ದ ವೇಳೆ ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಯಲ್ಲಾಪುರದ ಅರಣ್ಯ ವ್ಯಾಪ್ತಿಯಲ್ಲಿ ಕಪ್ಪು ಚಿರತೆ ಮರಿಯೊಂದು ಗಸ್ತು ತಿರುಗುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿಗೆ ಪ್ರತ್ಯಕ್ಷವಾಗಿದ್ದು, ತಾಯಿಗಾಗಿ ಹುಡುಕಾಟ ನಡೆಸಿರುವುದು ಕಂಡು ಬಂದಿತ್ತು.

ಇದು ಅರಣ್ಯಾಧಿಕಾರಿಗಳ ತಿಳಿದು ತಾಯಿ ಪತ್ತೆಗೆ ಮುಂದಾದಾಗ‌ ಮತ್ತೆರಡು ಮರಿಗಳೊಂದಿಗೆ ತಾಯಿ ಕೂಡ ಹುಡುಕಾಟದಲ್ಲಿ ತೊಡಗಿದ್ದು ಕಂಡು ಬಂದಿದೆ. ಬಳಿಕ ಮರಿಯು ತಾಯಿಯೊಂದಿಗೆ ಸೇರಿಕೊಂಡಿದ್ದು ಈ ದೃಶ್ಯವೂ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.

ತಾಯಿಯಿಂದ ಬೇರ್ಪಟ್ಟ ಕರಿ ಚಿರತೆ ಮರಿ : ಕರುಳಬಳ್ಳಿಗಾಗಿ ಹುಡುಕಾಡಿದ ತಾಯಿ

ದೇಶದಲ್ಲೇ ಕಪ್ಪು ಚಿರತೆ ಅಪರೂಪವಾಗಿದ್ದು, ಅವನತಿಯ ಅಂಚಿನಲ್ಲಿದೆ. ರಾಜ್ಯದಲ್ಲೇ ಉತ್ತರಕನ್ನಡ ಜಿಲ್ಲೆಯಲ್ಲಿ ಅತೀ ಹೆಚ್ಚು ಕಪ್ಪು ಚಿರತೆಗಳಿದ್ದು ಇದೀಗ ಮತ್ತೆ ಮೂರು ಮರಿಗಳಿಗೆ ಜನ್ಮ ನೀಡಿರುವುದು ಸಂತತಿ ಹೆಚ್ಚಳವಾಗಿದೆ.

ಇದನ್ನೂ ಓದಿ:ಮಹಿಳೆಯರು-ಮಕ್ಕಳಿಗೆ ಪೌಷ್ಠಿಕ ಆಹಾರ ಪೂರೈಕೆ : ಸರ್ಕಾರದ ಆದೇಶಕ್ಕೆ ತಡೆ ನೀಡಿದ ಹೈಕೋರ್ಟ್

ABOUT THE AUTHOR

...view details