ಕರ್ನಾಟಕ

karnataka

ETV Bharat / state

ಬಹುಮತ ಪಡೆದರು ಅಧಿಕಾರ ಹಿಡಿಯಲು ಬಿಜೆಪಿ ವಿಫಲ: ಧೂಳು ಹಿಡಿದಂತಾದ ಶಿರಸಿ ನಗರಸಭೆ - undefined

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಶಿರಸಿ ನಗರಸಭೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದಿಂದ ಗದ್ದುಗೆ ಹಿಡಿದಿದ್ದರೂ ಕೂಡ ಮೀಸಲಾತಿ ಸಮಸ್ಯೆಯಿಂದ ಒಂದು ವರ್ಷ ಕಳೆದರು ಅಧಿಕಾರಕ್ಕೆ ಏರುವಲ್ಲಿ ವಿಫಲವಾಗಿದೆ. ಇದರಿಂದ ನಗರಸಭೆಯ ದಿನನಿತ್ಯದ ವ್ಯವಹಾರಗಳಿಗೆ ತೊಂದರೆ ಉಂಟಾಗುತ್ತಿದ್ದು, ನಗರದ ಅಭಿವೃದ್ಧಿಗೂ ಹಿನ್ನಡೆಯಾಗಿದೆ.

ಧೂಳು ಹಿಡಿದಂತಾಗಿದೆ ಶಿರಸಿ ನಗರಸಭೆ

By

Published : Jul 22, 2019, 10:38 PM IST

ಶಿರಸಿ: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಶಿರಸಿ ನಗರಸಭೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದಿಂದ ಗದ್ದುಗೆ ಹಿಡಿದಿದ್ದರೂ ಕೂಡ ಮೀಸಲಾತಿ ಸಮಸ್ಯೆಯಿಂದ ಒಂದು ವರ್ಷ ಕಳೆದರು ಅಧಿಕಾರಕ್ಕೆ ಏರುವಲ್ಲಿ ವಿಫಲವಾಗಿದೆ. ಇದರಿಂದ ನಗರಸಭೆಯ ದಿನನಿತ್ಯದ ವ್ಯವಹಾರಗಳಿಗೆ ತೊಂದರೆ ಉಂಟಾಗುತ್ತಿದ್ದು, ನಗರದ ಅಭಿವೃದ್ಧಿಗೂ ಹಿನ್ನಡೆಯಾಗಿದೆ.

ಶಿರಸಿ ನಗರಸಭೆ

2018 ರ ಅಗಸ್ಟ್ ತಿಂಗಳಲ್ಲಿ ಶಿರಸಿ ನಗರಸಭೆಗೆ ಚುನಾವಣೆ ನಡೆದಿದ್ದು, 31 ವಾರ್ಡ್​ಗಳ ನಗರಸಭೆಯಲ್ಲಿ 17 ಸ್ಥಾನಗಳನ್ನು ಗೆದ್ದು ಸ್ಪಷ್ಟ ಬಹುಮತವನ್ನು ಬಿಜೆಪಿ ಪಡೆದುಕೊಂಡಿತ್ತು. ಫಲಿತಾಂಶದ ಬೆನ್ನಲ್ಲೇ ಅಧ್ಯಕ್ಷ ಸ್ಥಾನಕ್ಕೆ ಎ ವರ್ಗ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾತಿಯನ್ನು ನಿಗದಿಪಡಿಸಲಾಗಿತ್ತು. ಆದರೆ ರಾಜ್ಯದ ವಿವಿಧ ಕಡೆಗಳಲ್ಲಿ ಮೀಸಲಾತಿ ಕುರಿತಾಗಿ ನ್ಯಾಯಾಲಯದ ‌ಮೊರೆ ಹೋಗಿರುವ ಕಾರಣ ಒಂದು ವರ್ಷದಿಂದ ಆಡಳಿತ ಯಂತ್ರ ಧೂಳು ಹಿಡಿದಂತಾಗಿದೆ. ಅಲ್ಲದೇ ಈಗ ನಗರಸಭೆಯಲ್ಲಿ ಪೌರಾಯುಕ್ತರೂ ಇಲ್ಲದ ಕಾರಣ ಅಪ್ಪ ಅಮ್ಮನಿಲ್ಲದ ಸ್ಥಳೀಯ ಸಂಸ್ಥೆ ಎಂಬ ಟೀಕೆ ವ್ಯಕ್ತವಾಗಿದೆ.

ಆಡಳಿತ ಮಂಡಳಿ ಇಲ್ಲದ ಕಾರಣ ನಗರಸಭಾ ಪೌರಾಯುಕ್ತರು ಎಲ್ಲಾ ಕೆಲಸಗಳನ್ನು ನಿರ್ವಹಿಸುತ್ತಾ ಬಂದಿದ್ದರು. ಆದರೆ ಕಳೆದ 15 ದಿನಗಳ ಹಿಂದೆ ನಗರಸಭೆ ಪೌರಾಯುಕ್ತರಿಗೂ ವರ್ಗಾವಣೆಯಾಗಿದ್ದು, ಸಹಾಯಕ ಆಯುಕ್ತರು ಹೆಚ್ಚುವರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ಶಿರಸಿ ನಗರಸಭೆಗೆ ಅಧಿಕಾರ ವರ್ಗ ಹಾಗೂ ಆಡಳಿತ ಮಂಡಳಿ ಎರಡೂ ಇಲ್ಲದೇ ತಲೆ ಬುಡ ಇಲ್ಲದ ನಗರಸಭೆಯಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಭಿವೃದ್ಧಿ ಹಿನ್ನಡೆ :

ಚುನಾವಣಾ ಪೂರ್ವದಲ್ಲಿಯೇ ವಾರ್ಡ್​ವಾರು ಹಂಚಿಕೆಯಾಗಿದ್ದ ನಗರೋತ್ಥಾನ 3ರ ಕಾಮಗಾರಿಗಳು ಬಹುತೇಕ ಕಡೆಗಳಲ್ಲಿ ಕಳಪೆಯಾಗಿದೆ ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿ ಬಂದಿದೆ. ಆಡಳಿತ ಕಮಿಟಿ ಇಲ್ಲದ ಕಾರಣ ಆಯಾ ವಾರ್ಡ್ ಸದಸ್ಯರ ಮಾತುಗಳನ್ನೂ ಸಹ ಗುತ್ತಿಗೆದಾರರು ಕೇಳದೆ ತಮಗನಿಸಿದ ಹಾಗೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೇ ಕಾಮಗಾರಿಗಳು ಹಂಚಿಕೆಯಾಗಿ ಒಂದೂವರೆ ವರ್ಷ ಕಳೆಯುತ್ತಾ ಬಂದರು ಕೆಲವೊಂದು ಕಾಮಗಾರಿಗಳು ಪೂರ್ಣ ಪ್ರಮಾಣದಲ್ಲಿ ಮುಗಿದಿಲ್ಲ. ಇದರಿಂದ ಅಭಿವೃದ್ಧಿಗೆ ಸಾಕಷ್ಟು ಹಿನ್ನಡೆಯಾಗಿದ್ದು, ಆಡಳಿತ ಮಂಡಳಿ ಶೀಘ್ರ ಅಧಿಕಾರಕ್ಕೆ ಬರಲಿ ಎನ್ನುವುದು ಸಾರ್ವಜನಿಕರ ಆಶಯವಾಗಿದೆ.

For All Latest Updates

TAGGED:

ABOUT THE AUTHOR

...view details