ಕರ್ನಾಟಕ

karnataka

ETV Bharat / state

ಬಿಜೆಪಿಯ ಹಿರಿಯ ನಾಯಕ ಎಸ್ ಆರ್ ಪಿಕಳೆ ನಿಧನ : ಸಚಿವ ಶಿವರಾಮ್ ಹೆಬ್ಬಾರ್ ಕಂಬನಿ - ಸಚಿವ ಶಿವರಾಮ್ ಹೆಬ್ಬಾರ್ ಕಂಬನಿ

ಬಿಜೆಪಿಯ ಹಿರಿಯ ನಾಯಕ ಹಾಗೂ ಖ್ಯಾತ ವೈದ್ಯ ಡಾ. ಎಸ್.ಆರ್. ಪಿಕಳೆ ಅವರು ನಿಧನರಾಗಿದ್ದು, ಸಚಿವ ಶಿವರಾಮ್ ಹೆಬ್ಬಾರ್ ಹಾಗೂ ಶಾಸಕಿ ರೂಪಾಲಿ ನಾಯ್ಕ ಕಂಬನಿ ಮಿಡಿದಿದ್ದಾರೆ..

SR Pikale no more
ಎಸ್.ಆರ್. ಪಿಕಳೆ ನಿಧನ

By

Published : Dec 8, 2020, 8:20 PM IST

ಕಾರವಾರ (ಉತ್ತರ ಕನ್ನಡ) : ಕಾರವಾರದಲ್ಲಿ ಬಿಜೆಪಿ ಪಕ್ಷ ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಹಿರಿಯ ನಾಯಕ ಹಾಗೂ ಖ್ಯಾತ ವೈದ್ಯ ಡಾ. ಎಸ್ ಆರ್ ಪಿಕಳೆ (92) ಅವರು ಇಂದು ನಿಧನರಾಗಿದ್ದಾರೆ. ಕಳೆದ ಕೆಲ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು.

ಕಾರವಾರ ನಗರದಲ್ಲಿ ಡಾ.ಪಿಕಳೆ ನ್ಯೂ ನರ್ಸಿಂಗ್ ಹೋಮ್‌ ತೆರೆದು ಜನಸೇವೆ ಆರಂಭಿಸಿದವರು, ಬಳಿಕ ಜನಸಂಘದ ಮೂಲಕ ರಾಜಕೀಯಕ್ಕೆ ಪದಾರ್ಪಣೆ ಮಾಡಿದ್ದರು. 1980ರಲ್ಲಿ ಜನಸಂಘ ಬಿಜೆಪಿಯಾಗಿ ರೂಪಗೊಂಡಾಗ, ಕಾರವಾರದಲ್ಲಿ ಬಿಜೆಪಿಯನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.‌

ಬಳಿಕ ಕಾರವಾರ ನಗರಸಭೆ ಅಧ್ಯಕ್ಷರೂ ಆಗಿ ಉತ್ತಮ ಆಡಳಿತ ನೀಡಿದ್ದರು. ಇದೀಗ ಅವರ ನಿಧನದೊಂದಿಗೆ ಬಿಜೆಪಿಯ ಹಳೆಯ ಕೊಂಡಿಯೊಂದು ಕಳಚಿದಂತಾಗಿದೆ. ಎಸ್ ಆರ್ ಪಿಕಳೆ ನಿಧನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಹಾಗೂ ಶಾಸಕಿ ರೂಪಾಲಿ ನಾಯ್ಕ ಕಂಬನಿ ಮಿಡಿದಿದ್ದಾರೆ.

ಟ್ವೀಟ್ ಮಾಡಿ ಸಂತಾಪ ಸೂಚಿಸಿರುವ ಹೆಬ್ಬಾರ್, ಜನಸಂಘದ ಕಾಲಘಟ್ಟದಿಂದ ಕಾರವಾರದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ ಹಿರಿಯ ಚೇತನ ಡಾ.ಎಸ್ ಆರ್ ಪಿಕಳೆ ನಗರಸಭೆಯ ಅಧ್ಯಕ್ಷರಾಗಿ ಹಲವಾರು ಜನಪರ ಕಾರ್ಯವನ್ನು ಕೈಗೊಂಡು ಕಾರವಾರಿಗರ ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ.

ಶ್ರೀಯುತರ ನಿಧನದಿಂದ ಸಮಾಜಕ್ಕೆ ಹಾಗೂ ಪಕ್ಷಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಿ ಕುಟುಂಬ ವರ್ಗದವರಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ABOUT THE AUTHOR

...view details