ಕರ್ನಾಟಕ

karnataka

ETV Bharat / state

ರಸ್ತೆ ಸಂಪೂರ್ಣ ನಿರ್ಮಿಸುವಂತೆ ಕೇಳಿದ ಗ್ರಾಮಸ್ಥರ ವಿರುದ್ಧವೇ ಶಾಸಕರು ಕೋಪಗೊಂಡರಂತೆ: ಆರೋಪ - ಗ್ರಾಮಸ್ಥರ ವಿರುದ್ಧವೇ ಕೋಪಗೊಂಡ ಶಾಸಕರು

ಒಂದೆಡೆ ಶಾಸಕ ಗ್ರಾಮಸ್ಥರ ವಿರುದ್ಧ ಹರಿಹಾಯ್ದರೆ ಇನ್ನೊಂದೆಡೆ ಬಸ್​ ನಿರ್ವಾಹಕ ವಿದ್ಯಾರ್ಥಿಯೊಬ್ಬಳ ಮೇಲೆ ಅತಿರೇಕದ ವರ್ತನೆ ತೋರಿರುವ ಆರೋಪ ಕೇಳಿಬಂದಿದೆ.

bjp-mla-sunil-naik-rashed-against-the-villagers
ಗ್ರಾಮಸ್ಥರ ವಿರುದ್ಧವೇ ಹರಿಹಾಯ್ದ ಬಿಜೆಪಿ ಶಾಸಕ

By

Published : Feb 15, 2023, 3:04 PM IST

ವಿದ್ಯಾರ್ಥಿನಿಯೊಂದಿಗೆ ನಿರ್ವಾಹಕನ ಅತೀರೇಕದ ವರ್ತನೆ

ಕಾರವಾರ: ಸಂಪೂರ್ಣ ರಸ್ತೆ ಮಾಡಿಕೊಡಿ ಎಂದಿದ್ದಕ್ಕೆ ಗ್ರಾಮಸ್ಥರ ವಿರುದ್ಧವೇ ಶಾಸಕ ಸುನೀಲ್ ನಾಯ್ಕ ಹರಿಹಾಯ್ದಿರುವ ಆರೋಪ ಘಟನೆ ಭಟ್ಕಳ ತಾಲೂಕಿನ ಬೈಲೂರು ಗ್ರಾಮದಲ್ಲಿ ಕೇಳಿ ಬಂದಿದೆ. ಬೈಲೂರು ಗ್ರಾಮಕ್ಕೆ 400 ಮೀ ರಸ್ತೆ ಕಾಮಗಾರಿಗೆ ಭೂಮಿ ಪೂಜೆಗೆ ನೆರವೇರಿಸಲು ಆಗಮಿಸಿದ್ದ ವೇಳೆ ಸಂಪೂರ್ಣ ರಸ್ತೆ ಮಾಡಿಕೊಡುವಂತೆ ಕೇಳಿದ ಗ್ರಾಮಸ್ಥರ ವಿರುದ್ಧ ಕೆಂಡಾಮಂಡಲರಾದ ಎನ್ನಲಾದ ಶಾಸಕರು, 'ಯಾವಾಗ ರಸ್ತೆ ಮಾಡಬೇಕು ಅನ್ನೋದು ನನಗೆ ಗೊತ್ತಿದೆ ಎಂದು ಹೇಳಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಬೈಲೂರು ಗ್ರಾಮದ 1.8 ಕಿಮೀ ರಸ್ತೆ ಸಂಪೂರ್ಣ ಹಾಳಾಗಿದ್ದ ಹಿನ್ನೆಲೆಯಲ್ಲಿ ಸರಿಪಡಿಸಿಕೊಡುವಂತೆ ಗ್ರಾಮಸ್ಥರು ಸಾಕಷ್ಟು ಬಾರಿ ಮನವಿ ಮಾಡಿದ್ದರು. ಆದರೆ ಶಾಸಕರು ಕೇವಲ 400 ಮೀ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲು ಆಗಮಿಸಿದ್ದ ವೇಳೆ ಸಂಪೂರ್ಣ ರಸ್ತೆ ಮಾಡಿಕೊಡುವಂತೆ ಗ್ರಾಮಸ್ಥರಿಗೆ ಮನವಿ ಮಾಡಿದ್ದರು. ಆದರೆ, ಈ ವೇಳೆ ಗ್ರಾಮಸ್ಥರೊಂದಿಗೆ ಕೋಪದಿಂದ ವರ್ತಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಶಾಸಕರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ವಿದ್ಯಾರ್ಥಿನಿಯೊಂದಿಗೆ ನಿರ್ವಾಹಕನ ಅತೀರೇಕದ ವರ್ತನೆ

ಇದನ್ನು ಓದಿ:ಕಾರವಾರ: ಆಟವಾಡುತ್ತಿದ್ದ ಬಾಲಕ ತೋಟದ ಬಾವಿಗೆ ಬಿದ್ದು ದಾರುಣ ಸಾವು

ವಿದ್ಯಾರ್ಥಿನಿಯೊಂದಿಗೆ ನಿರ್ವಾಹಕನ ಅತೀರೇಕದ ವರ್ತನೆ- ಪ್ರತಿಭಟಿಸಿದ ಬಳಿಕ ಕ್ಷಮಯಾಚನೆ:ನಗರದ ಬಸ್ ನಿಲ್ದಾಣದಲ್ಲಿ ನಿರ್ವಾಹಕರೊಬ್ಬರು ಅತಿರೇಕದ ವರ್ತನೆ ತೋರಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯೊಬ್ಬರು ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ಇಲ್ಲಿನ ಮುದಗಾದಿಂದ ಕಾರವಾರಕ್ಕೆ ಬರುವ ಬಸ್​​ನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯೊಬ್ಬರು ಚೆಂಡಿಯಾದ ಐಸ್‌ಪ್ಲಾಟ್ ಬಳಿ ಬಸ್ ಹತ್ತಿದ್ದಾರೆ. ಈ ವೇಳೆ ನಿರ್ವಾಹಕರು ಮುಂದೆ ಹೋಗುವಂತೆ ದೂಡಿದ್ದು ವಿದ್ಯಾರ್ಥಿನಿ ಮುಂದಕ್ಕೆ ಮುಗ್ಗರಿಸಿದ್ದಾರೆ. ಈ ಘಟನೆ ವಿದ್ಯಾರ್ಥಿನಿಗೆ ಮುಜುಗರ ತಂದಿದೆ.

ಬಳಿಕ ಕಾರವಾರದ ನಿಲ್ದಾಣಕ್ಕೆ ಬಂದ ವಿದ್ಯಾರ್ಥಿನಿ ಬಸ್​ನಲ್ಲಿ ನಡೆದ ಘಟನೆಯ ಕುರಿತು ನಿರ್ವಾಹಕರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ನಿರ್ವಾಹಕನು ವಿದ್ಯಾರ್ಥಿನಿಯ ಮನವಿಯನ್ನು ಸರಿಯಾಗಿ ಆಲಿಸದೆ ಅತಿರೇಕದಿಂದ ಮಾತನಾಡಿದ್ದಾರೆ. ನೀನು ಎಷ್ಟು ಜನರನ್ನು ಕರೆದುಕೊಂಡು ಬರುತ್ತೀಯಾ ಕರೆದುಕೊಂಡು ಬಾ ಎಂದು ಕೂಗಾಡಿದ್ದಾರೆ. ನಿರ್ವಾಹಕರ ಈ ಮಾತುಗಳಿಂದ ವಿದ್ಯಾರ್ಥಿ ನೊಂದು ತನ್ನ ಸಹಪಾಠಿಗಳು ಮತ್ತು ವಿದ್ಯಾರ್ಥಿ ಒಕ್ಕೂಟದ ಮುಖಂಡ ರಾಘು ನಾಯ್ಕ ಅವರಿಗೆ ಕರೆ ಮಾಡಿದ್ದಾರೆ.

ಸ್ಥಳಕ್ಕೆ ಬಂದ ರಾಘು ನಾಯ್ಕ ಅವರು ನಡೆದ ಘಟನೆಯ ಬಗ್ಗೆ ನಿರ್ವಾಹಕರ ಬಳಿ ಪ್ರಶ್ನಿಸಿದ್ದಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮತ್ತು ನಿರ್ವಾಹಕರ ಮಧ್ಯೆ ವಾಗ್ವಾದ ನಡೆಯಿತು. ನಡೆದ ಘಟನೆಯ ಬಗ್ಗೆ ನಿರ್ವಾಹಕರು ಕ್ಷಮೆ ಕೇಳಿದ ನಂತರ ವಿದ್ಯಾರ್ಥಿಗಳು ಅಲ್ಲಿಂದ ತೆರಳಿದ್ದಾರೆ.

ಇದನ್ನೂ ಓದಿ:ಬೆಂಗಳೂರು-ವಿಜಯನಗರದಲ್ಲಿ ಲೋಕಾಯುಕ್ತ ದಾಳಿ.. ಎಫ್​ಡಿಒ-ಬೆಸ್ಕಾಂ ಅಸಿಸ್ಟೆಂಟ್ ಇಂಜಿನಿಯರ್ ಸೇರಿ ಮೂವರ ಬಂಧನ

ಇದನ್ನು ಓದಿ:ಉತ್ತರ ಕನ್ನಡ: ಎಲ್ಲ 6 ಕ್ಷೇತ್ರಗಳಲ್ಲೂ ಜೆಡಿಎಸ್‌ ಅಭ್ಯರ್ಥಿಗಳು ಕಣಕ್ಕೆ- ಹೆಚ್‌ಡಿಕೆ

ABOUT THE AUTHOR

...view details