ಕಾರವಾರ: ಜೆಡಿಎಸ್ ಹಾಗೂ ಪಕ್ಷೇತರರ ಬೆಂಬಲ ದೊರೆತ ಬೆನ್ನಲ್ಲೆ ಬಿಜೆಪಿಯೂ ಕಾರವಾರ ನಗರಸಭೆ ಗದ್ದುಗೆ ಏರಲು ಸಜ್ಜಾಗಿದ್ದು, ಅಧ್ಯಕ್ಷ ಹುದ್ದೆಗೆ ಡಾ.ನಿತಿನ್ ಪಿಕಳೆ ಹಾಗೂ ಉಪಾಧ್ಯಕ್ಷ ಅಭ್ಯರ್ಥಿಯಾಗಿ ಪ್ರಕಾಶ ಪಿ.ನಾಯ್ಕ ಅವರನ್ನು ಅಂತಿಮಗೊಳಿಸಿದೆ.
ಜೆಡಿಎಸ್, ಪಕ್ಷೇತರರ ಬೆಂಬಲ: ಅಧ್ಯಕ್ಷ - ಉಪಾಧ್ಯಕ್ಷ ಅಭ್ಯರ್ಥಿಗಳನ್ನ ಅಂತಿಮಗೊಳಿಸಿದ ಬಿಜೆಪಿ - ಕಾರವಾರ ಅಧ್ಯಕ್ಷ ಉಪಾಧ್ಯಕ್ಷರನ್ನು ಅಂತಿಮಗೊಳಿಸಿದ ಬಿಜೆಪಿ
ಜೆಡಿಎಸ್ ಹಾಗೂ ಪಕ್ಷೇತರರ ಬೆಂಬಲ ದೊರೆತ ಬೆನ್ನಲ್ಲೆ ಬಿಜೆಪಿಯೂ ಕಾರವಾರ ನಗರಸಭೆ ಗದ್ದುಗೆ ಏರಲು ಸಜ್ಜಾಗಿದ್ದು, ಅಧ್ಯಕ್ಷ ಹುದ್ದೆಗೆ ಡಾ.ನಿತಿನ್ ಪಿಕಳೆ ಹಾಗೂ ಉಪಾಧ್ಯಕ್ಷ ಅಭ್ಯರ್ಥಿಯಾಗಿ ಪ್ರಕಾಶ ಪಿ.ನಾಯ್ಕ ಅವರನ್ನು ಅಂತಿಮಗೊಳಿಸಿದೆ.

ಕಾರವಾರ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಇಂದು ಕ್ಷೇತ್ರದ ಶಾಸಕಿ ರೂಪಾಲಿ ಎಸ್. ನಾಯ್ಕ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಭ್ಯರ್ಥಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಕಾರವಾರ ನಗರಸಭೆಗೆ ಆಯ್ಕೆಯಾದ ಬಿಜೆಪಿಯ ಎಲ್ಲ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು. ನಗರದ ಅಭಿವೃದ್ದಿಗೆ ಸದಸ್ಯರು ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಬೇಕು. ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೇ ನಿರಂತರವಾಗಿ ಕೆಲಸ ಮಾಡಬೇಕು. ಜೆಡಿಎಸ್ ಪಕ್ಷದ ನಾಲ್ವರು ಅಭ್ಯರ್ಥಿಗಳು ಹಾಗೂ ಇಬ್ಬರು ಪಕ್ಷೇತರರು ಸಹ ಬಾಹ್ಯವಾಗಿ ಬೆಂಬಲ ಸೂಚಿಸಿದ್ದು, ಸ್ವಾಗತಾರ್ಹವಾಗಿದೆ ಎಂದು ಶಾಸಕಿ ಈ ವೇಳೆ ಸ್ಪಷ್ಟಪಡಿಸಿದರು.
ಕಾರವಾರ ನಗರಸಭೆ ಅಭಿವೃದ್ಧಿಯಲ್ಲಿ ರಾಜ್ಯಕ್ಕೇ ಮಾದರಿಯಾಗಬೇಕು. ನಗರದ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲ ಸದಸ್ಯರೂ ಒಂದೇ ಕುಟುಂಬದವರಂತೆ ಇದ್ದು, ಅವಿರತವಾಗಿ ಅಭಿವೃದ್ಧಿ ಕೆಲಸಗಳಲ್ಲಿ ತೊಡಗಿಕೊಳ್ಳಬೇಕು. ಹಿಂದುಳಿದ ವಾರ್ಡ್ಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ನಗರದ ಅಭಿವೃದ್ಧಿಗೆ ತಮ್ಮ ಸಂಪೂರ್ಣ ಸಹಕಾರ ಇದೆ ಎಂದು ಶಾಸಕಿ ಅಭಿಪ್ರಾಯಪಟ್ಟರು.