ಕಾರವಾರ :ಮಹಾರಾಷ್ಟ್ರ ರಾಜಕಾರಣದ ಬಿಕ್ಕಟ್ಟಿಗೆ ಬಿಜೆಪಿ ಕಾರಣವಲ್ಲ. ಶಿವಸೇನೆ ಅಧಿಕಾರಕ್ಕೋಸ್ಕರ ಠಾಕ್ರೆ ಪುತ್ರ ಯಾವ ರೀತಿ ಅನಾಹುತ ಮಾಡಿದ್ದಾರೆಂಬುದು ಇದೀಗ ಜಗತ್ತಿಗೆ ಗೊತ್ತಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಕಾರವಾರದಲ್ಲಿ ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಶಿವಸೇನೆ ಯಾವ ಮಾನದಂಡವನ್ನು ಇಟ್ಕೊಂಡು ಮೈತ್ರಿ ಮಾಡಿಕೊಂಡರೋ ಗೊತ್ತಿಲ್ಲ. ಆದರೆ ಇದೀಗ ತಮಗೆ ಬಿಜೆಪಿ ಒಂದೇ ಸಮನ್ವಯ ಹೊಂದುವ ಪಕ್ಷ ಎಂದು ಶಿಂದೆ ಹೇಳಿದ್ದಾರೆ. ಮೈತ್ರಿ ಗೊಂದಲದಿಂದ ಈ ರೀತಿ ಮಹಾರಾಷ್ಟ್ರದಲ್ಲಿ ಬೆಳವಣಿಗೆಗಳಾಗಿವೆ. ಬಿಜೆಪಿ ಜೊತೆ ಕೈ ಜೋಡಿಸಿದರೆ ಸೂಕ್ತ ಎಂದು ಬಂಡಾಯ ಶಾಸಕರು ನಿರ್ಧಾರ ತೆಗೆದುಕೊಂಡಿದ್ದಾರೆ. ಆರೋಗ್ಯಕರ ವಾತಾವರಣಕ್ಕೆ ನಮ್ಮವರು ಕೂಡ ಬೆಂಬಲ ನೀಡುತ್ತಿದ್ದಾರೆ ಎಂದರು.