ಶಿರಸಿ: ಅನುಮಾನಾಸ್ಪದವಾಗಿ ಕಾಡುಕೋಣವೊಂದು ಮೃತಪಟ್ಟಿರುವ ಘಟನೆ ಸಿದ್ದಾಪುರದ ಬಾಳೂರು ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಕಾಡುಕೋಣದ ಮೃತದೇಹ ಪತ್ತೆ.. ಗುಂಡು ತಾಗಿ ಮೃತಪಟ್ಟ ಶಂಕೆ.. - ಅರಣ್ಯ ಇಲಾಖೆ
2 ದಿನಗಳ ಹಿಂದೆ ಮೃತಪಟ್ಟ ಕಾಡುಕೋಣದ ದೇಹ ಪತ್ತೆಯಾಗಿದೆ. ಮೈಮೇಲೆ ಗಾಯದ ಕಲೆಗಳು ಕಂಡು ಬಂದಿದ್ದು, ಗುಂಡು ತಾಗಿ ಕಾಡುಕೋಣ ಮೃತಪಟ್ಟ ಶಂಕೆ ವ್ಯಕ್ತವಾಗಿದೆ.
![ಕಾಡುಕೋಣದ ಮೃತದೇಹ ಪತ್ತೆ.. ಗುಂಡು ತಾಗಿ ಮೃತಪಟ್ಟ ಶಂಕೆ..](https://etvbharatimages.akamaized.net/etvbharat/prod-images/768-512-4199163-thumbnail-3x2-bison.jpg)
ಕಾಡುಕೋಣದ ಮೃತದೇಹ
2 ದಿನಗಳ ಹಿಂದೆ ಮೃತಪಟ್ಟ ಕಾಡುಕೋಣದ ದೇಹ ಪತ್ತೆಯಾಗಿದೆ. ಮೈಮೇಲೆ ಗಾಯದ ಕಲೆಗಳು ಕಂಡು ಬಂದಿದ್ದು, ಗುಂಡು ತಾಗಿ ಕಾಡುಕೋಣ ಮೃತಪಟ್ಟ ಶಂಕೆ ವ್ಯಕ್ತವಾಗಿದೆ.
ಕಾಡುಕೋಣದ ಮೃತದೇಹ..
ಇದೇ ಸ್ಥಳದಲ್ಲಿ ವ್ಯಕ್ತಿಯೊಬ್ಬರು ಅಸಹಜವಾಗಿ ಮೃತಪಟ್ಟಿದ್ದರು. ವ್ಯಕ್ತಿ ಸಾವಿಗೂ ಕಾಡುಕೋಣದ ಸಾವಿಗೂ ಲಿಂಕ್ ಇರುವ ಕುರಿತು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಭಾಗದಲ್ಲಿ ಬೇಟೆ ನಡೆಯುವ ಕಾರಣ ಕಾಳಗ ನಡೆದು ಇಬ್ಬರೂ ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.ಸ್ಥಳಕ್ಕೆ ಅರಣ್ಯಾಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿದ್ದಾಪುರ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.