ಕಾರವಾರ:ಒಂದೆಡೆ ಹೆದ್ದಾರಿಯಲ್ಲಿ ಬೈಕನ್ನ ಏರಿ ರೈಡಿಗೆ ಹೊರಟಿರುವ ಯುವತಿಯರು, ಇನ್ನೊಂದೆಡೆ ಕಡಲಿಗೆ ಇಳಿದು ಸ್ವಚ್ಚತೆಯಲ್ಲಿ ತೊಡಗಿರುವ ಇದೇ ಯುವತಿಯರು. ಮತ್ತೊಂದೆಡೆ ಜನರನ್ನು ಗುಂಪಾಗಿ ಸೇರಿಸಿ ಸರ್ಕಾರಿ ಕಚೇರಿ ಆವರಣದಲ್ಲಿ ಸ್ವಚ್ಛತೆ ಮಾಡ್ತಾ ಇದ್ದಾರೆ. ಈ ದೃಶ್ಯ ಕಂಡು ಬಂದಿದ್ದು ಕಡಲ ನಗರಿ ಕಾರವಾರದಲ್ಲಿ.
ಸ್ವಚ್ಛತೆ ಜಾಗೃತಿಗಾಗಿ ಬೈಕ್ ರೈಡಿಂಗ್: ಕಡಲ ತೀರದ ಸ್ಚಚ್ಚತೆಗಾಗಿ ಇಬ್ಬರು ಯುವತಿಯರು ಜಾಗೃತಿ ಮೂಡಿಸುತ್ತಿದ್ದಾರೆ. ಬೆಂಗಳೂರು ಮೂಲದ ಅನಿತಾ, ಸ್ವಾತಿ ಎನ್ನುವ ಯುವತಿಯರು ಕಡಲ ತೀರದಲ್ಲಿನ ಸ್ವಚ್ಛತೆಯ ಜಾಗೃತಿಯನ್ನ ಮೂಡಿಸೋದಕ್ಕಾಗಿ ಬೈಕ್ ರೈಡಿಂಗ್ ಮಾಡ್ತಾ ಇದ್ದಾರೆ. ಅಕ್ಟೋಬರ್ 9 ನೇ ತಾರೀಖು ಈ ರೈಡಿಂಗ್ನನ್ನ ಬೆಂಗಳೂರಿನಿಂದ ಯುವತಿಯರು ಪ್ರಾರಂಭಿಸಿದ್ದಾರೆ.
ಯುವತಿಯರು ರಾಜ್ಯದ ಕರಾವಳಿ ಜಿಲ್ಲೆಯಾದ ಮಂಗಳೂರು, ಉಡುಪಿಯ ಹಲವು ಕಡಲ ತೀರಗಳಲ್ಲಿ ಸ್ವಚ್ಛತೆ ಮಾಡಿ ಜನರಲ್ಲಿ ಜಾಗೃತಿ ಮೂಡಿಸಿ ಇಂದು ಕಾರವಾರಕ್ಕೆ ಆಗಮಸಿದರು. ಕಾರವಾರದಲ್ಲಿ ಪಹರೆ ವೇದಿಕೆ ಎನ್ನುವ ತಂಡದೊಂದಿಗೆ ನಗರದ ರವೀಂದ್ರನಾಥ್ ಠಾಗೋರ್ ಕಡಲ ತೀರದಲ್ಲಿ ಸಚ್ಛತೆಯನ್ನ ಮಾಡಿದರು.
29 ಕಡಲ ತೀರಗಳಿಗೆ ಭೇಟಿ:ಇನ್ನು ರಾಜ್ಯದ ಸುಮಾರು 29 ಕಡಲ ತೀರಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸುವ ಕಾರ್ಯವನ್ನ ಈ ಯುವತಿಯರು ಮಾಡುತ್ತಾ ಇದ್ದಾರೆ. ಸಮುದ್ರಕ್ಕೆ ಪ್ಲಾಸ್ಟಿಕ್ ನಂತಹ ಅಪಾಯಕಾರಿ ವಸ್ತುಗಳ ಸೇರಿ ಮಲೀನ ಆಗುವುದರಿಂದ ಪ್ರಕೃತಿ ಮೇಲೆ ದೊಡ್ಡ ಪರಿಣಾಮ ಬೀಳುತ್ತದೆ. ಈ ನಿಟ್ಟಿನಲ್ಲಿ ನಮ್ಮಲ್ಲಿರುವ ಕಡಲ ತೀರ ಪ್ರದೇಶವನ್ನ ಸ್ವಚ್ಚವಾಗಿಡಬೇಕು ಎನ್ನುವ ಕಾರಣಕ್ಕೆ ಈ ರೈಡಿಂಗ್ ಪ್ರಾರಂಭಿಸಿದ್ದು, ಸುಮಾರು 1400 ಕಿಲೋ ಮೀಟರ್ ಸಂಚರಿಸಲಿದ್ದಾರೆ.