ಶಿರಸಿ:ತಾಲೂಕಿನ ಕೆರೆಕೊಪ್ಪ ಕ್ರಾಸ್ ಬಳಿ ಬೈಕ್ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರರಿಬ್ಬರೂ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದ ಘಟನೆ ಸಂಭವಿಸಿದೆ.
ಬೈಕ್ ಸವಾರರಾದ ಕಲ್ಲಿಯ ವಿನಯ್ ನಾಯ್ಕ ಹಾಗೂ ಆತನ ಸಹೋದರಿ ವಿದ್ಯಾ ನಾಯ್ಕ ಮೃತ ದುರ್ದೈವಿಗಳಾಗಿದ್ದಾರೆ. ಆರೋಪಿಯಾಗಿರುವ ಲಾರಿ ಚಾಲಕ ಉಂಚಳ್ಳಿಯ ಪ್ರವೀಣ ಭಂಡಾರಿ ಶಿರಸಿ ಕಡೆಯಿಂದ ಬನವಾಸಿ ಕಡೆಗೆ ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಡ್ರೈ ಮಾಡ್ತಿದ್ದ ವೇಳೆ ಏಕಾಏಕಿ ಹರೀಶಿ ರಸ್ತೆ ಕಡೆಗೆ ತಿರುಗಿಸಿದ್ದಾನೆ. ಈ ವೇಳೆ ಎದುರಿನಿಂದ ಬಂದ ಬೈಕ್ ಲಾರಿಯ ಅಡಿಯಲ್ಲಿ ಸಿಲುಕಿದೆ. ಘಟನೆಯಲ್ಲಿ ಬೈಕ್ ಸವಾರರಿಬ್ಬರ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ಕಾಲುಗಳಿಗೂ ಗಂಭೀರ ಗಾಯಗಳಾಗಿದ್ದವು.